ನನ್ನಪ್ರಕಾರ: ಕೌತುಕದ ಕುಲುಮೆಯನ್ನು ಧಗಧಗಿಸಿದ ಟ್ರೇಲರ್!

ಶನಿವಾರ, 17 ಆಗಸ್ಟ್ 2019 (15:25 IST)
ಪ್ರೇಕ್ಷಕರ ವಲಯದಲ್ಲಿ ಕೌತುಕದ ಕುಲುಮೆಯೊಂದನ್ನು ಸದಾ ಹದಮುದವಾಗಿ ನಿಗಿನಿಗಿಸುವಂತೆ ಮಾಡುತ್ತಾ ಬಂದಿದ್ದ ಚಿತ್ರ ನನ್ನ ಪ್ರಕಾರ. ಪೋಸ್ಟರ್ಗಳು, ಹಾಡು ಮುಂತಾದವುಗಳಲ್ಲಿನ ಹೊಸ ಪ್ರಯತ್ನಗಳ ಮೂಲಕವೇ ಹೊಸಾ ಹೊಳಹೊಂದನ್ನು ಪ್ರೇಕ್ಷಕರಿಗೆ ತಲುಪಿಸುವಲ್ಲಿಯೂ ಹೊಸಬರ ತಂಡ ಯಶ ಕಂಡಿತ್ತು. ಇನ್ನೇನು ಈ ಚಿತ್ರ ಇದೇ ಇಪ್ಪತ್ಮೂರರಂದು ತೆರೆಗಾಣುತ್ತಿದೆ. ಈ ಹೊತ್ತಿನಲ್ಲಿಯೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ರೇಲರ್ ಲಾಂಚ್ ಮಾಡಿದ್ದಾರೆ. ಈ ಮೂಲಕ ಪ್ರೇಕ್ಷಕರೆದೆಯಲ್ಲಿ ಕೌತುಕದ ಕುಲುಮೆ ಧಗಧಗಿಸಲಾರಂಭಿಸಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರೀತಿಯಿಂದ ಬಿಡುಗಡೆಗೊಳಿಸಿರೋ ಟ್ರೇಲರ್ನ ಖದರ್ ಕಂಡು ಎಲ್ಲರೂ ಅವಾಕ್ಕಾಗಿದ್ದಾರೆ. ಸದಾ ಹೊಸಬರ ಪ್ರಯತ್ನಗಳಿಗೆ ಸಹಕಾರ ನೀಡುತ್ತಾ ಪ್ರೋತ್ಸಾಹಿಸೋ ಸ್ವಭಾವದ ದರ್ಶನ್ ಇದೀಗ ನನ್ನಪ್ರಕಾರ ಚಿತ್ರತಂಡಕ್ಕೂ ಸಾಥ್ ನೀಡಿದ್ದಾರೆ.

ಸುಂದರವಾದ ಸಮಾರಂಭದಲ್ಲಿ ಅಷ್ಟೇ ಸುಂದರವಾದ ಟ್ರೇಲರ್ ಅನ್ನು ಲಾಂಚ್ ಮಾಡಿದ್ದಾರೆ. ಸ್ವತಃ ಅವರೇ ಅದನ್ನು ಮೆಚ್ಚಿಕೊಂಡು, ಈ ಹೊಸಬರ ತಂಡಕ್ಕೆ ಅದ್ಭುತವಾದ ಗೆಲುವು ಸಿಗಲೆಂದು ಹಾರೈಸಿದ್ದಾರೆ. ಇದರಿಂದ ನನ್ನಪ್ರಕಾರ ಚಿತ್ರದ ಗೆಲುವು ಮತ್ತಷ್ಟು ನಿಚ್ಚಳವಾದಂತಾಗಿದೆ.
ಕುತೂಹಲಕರವಾದ ಕ್ರೈಂ ಸಸ್ಪೆನ್ಸ್ ಥ್ರಿಲ್ಲರ್ ಕಥಾನಕದ ಚಹರೆಯನ್ನು ತುಂಬಿಕೊಂಡಿರೋ ಈ ಟ್ರೇಲರ್ ವೇಗವಾಗಿ ಹೆಚ್ಚೆಚ್ಚು ವೀಕ್ಷಣೆ ಪಡೆದುಕೊಂಡು ಟ್ರೆಂಡಿಂಗ್ನತ್ತ ದಾಪುಗಾಲಿಡುತ್ತಿದೆ. ಇದನ್ನು ನೋಡಿದ ಎಲ್ಲರೂ ಈ ಹೊಸಬರ ತಂಡವನ್ನು ಮೆಚ್ಚಿ ಕೊಂಡಾಡುತ್ತಿದ್ದಾರೆ. ಇದರಲ್ಲಿ ಕಿಶೋರ್, ಪ್ರಿಯಾಮಣಿ, ಮಯೂರಿ ಪಾತ್ರಗಳ ಝಲಕ್ಕುಗಳೂ ಅನಾವರಣಗೊಂಡಿವೆ.

ಈ ಸಿನಿಮಾದಲ್ಲಿರೋ ಪ್ರತೀ ಪಾತ್ರಗಳನ್ನೂ ಕೂಡಾ ಸದರಿ ಟ್ರೇಲರ್ ಪ್ರೇಕ್ಷಕರಿಗೆ ಪರಿಚಯಿಸಿದೆ. ಪರಿಣಾಮಕಾರಿಯಾದ ಟ್ರೇಲರ್ಗಳ ಸಾಲಿನಲ್ಲಿ ದಾಖಲಾಗೋ ಗುಣಗಳನ್ನು ಹೊಂದಿರೋ ನನ್ನಪ್ರಕಾರ ಟ್ರೇಲರ್ ಪ್ರೇಕ್ಷಕರಲ್ಲಿ ಅಪರೂಪದ ಫೀಲ್ ತುಂಬುತ್ತಿದೆ. ಈ ದೆಸೆಯಿಂದಲೇ ಇದೇ ತಿಂಗಳ 23ರಂದು ಈ ಸಿನಿಮಾ ನೋಡುವ ಕಾತರವೂ ಹೆಚ್ಚಿಕೊಂಡಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಟ್ರೇಲರ್ ಮೂಲಕ ಜಾಹೀರಾಯ್ತು ರಾಂಧವನ ಅದ್ಭುತ ಕಥೆ!