ಶೀಘ್ರದಲ್ಲೇ ಮಗು ಮಾಡಿಕೊಳ್ಳುವ ಯೋಚನೆಯಲ್ಲಿದ್ದಾರಂತೆ ಪ್ರಿಯಾಂಕಾ ಚೋಪ್ರಾ!

ಶನಿವಾರ, 7 ಸೆಪ್ಟಂಬರ್ 2019 (11:46 IST)
ಮುಂಬೈ: ಹಾಲಿವುಡ್ ಗಾಯಕ ನಿಕ್ ಜೊನಾಸ್ ನ ಮಡದಿ, ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾಗೆ ತಕ್ಷಣವೇ ಮಗು ಮಾಡಿಕೊಳ್ಳುವ ಬಯಕೆಯಾಗಿದೆಯಂತೆ.


ಸಂದರ್ಶನವೊಂದರಲ್ಲಿ ತಕ್ಷಣವೇ ನೀವು ಮಾಡಬಯಸುವ ಕೆಲಸಗಳು ಯಾವೆಲ್ಲಾ ಎಂದು ಕೇಳಿದ್ದಕ್ಕೆ ಪ್ರಿಯಾಂಕಾ ತಕ್ಷಣವೇ ನನಗೆ ಮಗು ಮಾಡಿಕೊಳ್ಳಬೇಕು ಮತ್ತು ಲಾಸ್ ಏಂಜಲೀಸ್ ನಲ್ಲಿ ಮನೆ ಮಾಡಿಕೊಳ್ಳಬೇಕು ಎಂದಿದ್ದಾರೆ.

ಮೂಲತಃ ಭಾರತೀಯಳಾದರೂ ಸದ್ಯಕ್ಕೆ ಪ್ರಿಯಾಂಕಾ ಹಾಲಿವುಡ್ ನಲ್ಲೂ ಅವಕಾಶ ಪಡೆಯುತ್ತಿದ್ದಾರೆ. ಹೀಗಾಗಿ ಮುಂದೊಂದು ದಿನ ಲಾಸ್ ಏಂಜಲೀಸ್ ನಲ್ಲಿ ಸೆಟ್ಲ್ ಆಗುವ ಯೋಚನೆಯಲ್ಲಿದ್ದಾರೆ. ಸದ್ಯಕ್ಕೆ ಭಾರತ ಮತ್ತು ಅಮೆರಿಕಾ ನಡುವೆ ಆಗಾಗ ತಮ್ಮ ವೃತ್ತಿ, ವೈಯಕ್ತಿಕ ಜೀವನದ ನಡುವೆ ಹೊಂದಾಣಿಕೆ ಮಾಡಿಕೊಳ್ಳಲು ಓಡಾಡುತ್ತಲೇ ಇರುತ್ತಾರೆ ಪ್ರಿಯಾಂಕಾ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಪೈಲ್ವಾನ್ ಪ್ರಿ ರಿಲೀಸ್ ಈವೆಂಟ್ ಗೆ ಬಂದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು