ಮುಂಬೈ: ಸ್ಯಾಂಡಲ್ ವುಡ್, ಟಾಲಿವುಡ್, ಕಾಲಿವುಡ್ ಬಳಿಕ ಈಗ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಬಾಲಿವುಡ್ ಗೆ ಹಾರುತ್ತಿದ್ದಾರೆ. ಕೊನೆಗೂ ಹಿಂದಿಯಲ್ಲಿ ರಶ್ಮಿಕಾ ಚಮಕ್ ಕೊಡಲಿದ್ದಾರೆ ಎಂಬ ಸುದ್ದಿ ಬಂದಿದೆ.
ಈಗಾಗಲೇ ಕನ್ನಡಕ್ಕಿಂತಲೂ ಬೇರೆ ಭಾಷೆಗಳಲ್ಲೇ ಹೆಚ್ಚು ಮಿಂಚುತ್ತಿದ್ದಾರೆ. ಈಗ ಬಾಲಿವುಡ್ ಗೆ ಕಾಲಿಡುವ ಮೂಲಕ ಅದೃಷ್ಟ ಖುಲಾಯಿಸಿಕೊಂಡಿದ್ದಾರೆ. ಜೆರ್ಸಿ ರಿಮೇಕ್ ಸಿನಿಮಾದಲ್ಲಿ ಶಾಹಿದ್ ಕಪೂರ್ ಅಭಿನಯಿಸುತ್ತಿದ್ದು, ಈ ಸಿನಿಮಾಗೆ ರಶ್ಮಿಕಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಓಡಾಡುತ್ತಿದೆ.
ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಘೋಷಣೆಯೊಂದೇ ಬಾಕಿ ಎನ್ನಲಾಗಿದೆ. ಲಕ್ಕಿ ಹೀರೋಯಿನ್ ಎಂದೇ ಎನಿಸಿಕೊಂಡಿರುವ ರಶ್ಮಿಕಾಗೆ ಬಾಲಿವುಡ್ ಕೂಡಾ ಲಕ್ಕಿ ಎನಿಸಿಕೊಳ್ಳುತ್ತಾ ಕಾದು ನೋಡಬೇಕು.