Select Your Language

Notifications

webdunia
webdunia
webdunia
webdunia

ತನ್ನ ಜೀವನಾಧಾರಿತ ಸಿನಿಮಾಗೆ ಈ ಸ್ಟಾರ್ ನಟಿಯೇ ನಾಯಕಿಯಾಗಲಿ ಎಂದ ಪಿವಿ ಸಿಂಧು

ತನ್ನ ಜೀವನಾಧಾರಿತ ಸಿನಿಮಾಗೆ ಈ ಸ್ಟಾರ್ ನಟಿಯೇ ನಾಯಕಿಯಾಗಲಿ ಎಂದ ಪಿವಿ ಸಿಂಧು
ಹೈದರಾಬಾದ್ , ಮಂಗಳವಾರ, 3 ಸೆಪ್ಟಂಬರ್ 2019 (10:25 IST)
ಹೈದರಾಬಾದ್: ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಇತ್ತೀಚೆಗೆ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಗೆದ್ದ ಮೇಲೆ ಆಕೆಯ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದೆ. ದೇಶವೇ ಹೆಮ್ಮೆಪಡುವಂತಹ ಸಾಧನೆ ಮಾಡಿದ ಚಿನ್ನದ ಹುಡುಗಿ ಜೀವನಾಧಾರಿತ ಸಿನಿಮಾವೊಂದು ಈಗ ತೆರೆಗೆ ಬರುತ್ತಿದೆ.


ಪಿವಿ ಸಿಂಧು ಕುರಿತಾದ ಸಿನಿಮಾ ಮಾಡಲು ಸೋನು ಸೂಧ್ ಹಕ್ಕು ಪಡೆದುಕೊಂಡಿದ್ದಾರೆ. ಇದೀಗ ಸ್ಕ್ರಿಪ್ಟ್ ಕೆಲಸ ನಡೆಯುತ್ತಿದ್ದು, ಸದ್ಯದಲ್ಲೇ ಈ ಸಿನಿಮಾ ಸೆಟ್ಟೇರಬಹುದು.

ಆದರೆ ಇಲ್ಲಿ ಸಿಂಧು ಪಾತ್ರ ಯಾರು ಮಾಡಬೇಕು ಎಂಬ ಪ್ರಶ್ನೆಗೆ ಸ್ವತಃ ಬ್ಯಾಡ್ಮಿಂಟನ್ ತಾರೆ ಉತ್ತರಿಸಿದ್ದಾರೆ. ತಮ್ಮ ಪಾತ್ರವನ್ನು ಬ್ಯಾಡ್ಮಿಂಟನ್ ಪಟು ಪ್ರಕಾಶ್ ಪಡುಕೋಣೆ ಪುತ್ರಿಯೂ ಆಗಿರುವ ನಟಿ ದೀಪಿಕಾ ಪಡುಕೋಣೆ ನಿರ್ವಹಿಸಬೇಕು ಎಂದು ಸಿಂಧುಗೆ ಆಸೆಯಂತೆ. ಹೀಗಾಗಿ ದೀಪಿಕಾರೇ ಈ ಪಾತ್ರ ಮಾಡಿದರೂ ಅಚ್ಚರಿಯಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ರಜನೀಕಾಂತ್ 2.0 ದಾಖಲೆ ಮುರಿದ ಸಾಹೋ