ಸಲ್ಮಾನ್ ಖಾನ್ ಗೆ ಸಂಕಷ್ಟ! ಸೂಪರ್ ಸ್ಟಾರ್ ವಿರುದ್ಧ ಎಫ್ ಐಆರ್ ದಾಖಲು

ಶುಕ್ರವಾರ, 6 ಸೆಪ್ಟಂಬರ್ 2019 (10:21 IST)
ಮುಂಬೈ: ಪತ್ರಕರ್ತನ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಸಲ್ಮಾನ್ ಖಾನ್ ವಿರುದ್ಧ ಎಫ್ ಐಆರ್ ದಾಖಲಾಗಿದೆ.


ಕೆಲವು ದಿನಗಳ ಹಿಂದೆ ಚಿತ್ರೀಕರಣದಲ್ಲಿದ್ದಾಗ ಫೋಟೋ ತೆಗೆದಿದ್ದಕ್ಕೆ ಪತ್ರಕರ್ತನೊಬ್ಬನ ಮೇಲೆ ಸಲ್ಮಾನ್ ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಒಪ್ಪಿಗೆ ಪಡೆದು ಫೋಟೋ ತೆಗೆದರೂ ನನ್ನ ಮೇಲೆ ಸಲ್ಮಾನ್ ಮತ್ತು ಅವರ ಅಂಗರಕ್ಷಕರು ಹಲ್ಲೆ ಮಾಡಿದ್ದಾರೆ ಎಂಬುದು ಪತ್ರಕರ್ತನ ಆರೋಪವಾಗಿತ್ತು.

ಆದರೆ ಪೊಲೀಸರಿಗೆ ದೂರು ನೀಡಿದರೂ ಅವರು ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಹೀಗಾಗಿ ಆತ ನೇರವಾಗಿ ಕೋರ್ಟ್ ಮೊರೆ ಹೋಗಿದ್ದು, ಕೋರ್ಟ್ ಆದೇಶದ ಮೇರೆಗೆ ಈಗ ಎಫ್ ಐಆರ್ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ರಶ್ಮಿಕಾ ಮಂದಣ್ಣ ಸೆನ್ಸೇಷನ್ ಆಫ್ ದಿ ಇಯರ್