Select Your Language

Notifications

webdunia
webdunia
webdunia
webdunia

ಕಿಸ್ ಟ್ರೇಲರ್ ಅನಾವರಣಗೊಳಿಸಿದ ರಾಕಿಂಗ್ ಸ್ಟಾರ್!

ಕಿಸ್ ಟ್ರೇಲರ್ ಅನಾವರಣಗೊಳಿಸಿದ ರಾಕಿಂಗ್ ಸ್ಟಾರ್!
ಬೆಂಗಳೂರು , ಶನಿವಾರ, 24 ಆಗಸ್ಟ್ 2019 (15:46 IST)
ಕಿಸ್ ಚಿತ್ರ ಬಿಡುಗಡೆ ಆಗೋದ್ಯಾವತ್ತೆಂಬ ಪ್ರಶ್ನೆ ಪ್ರೇಕ್ಷಕರ ವಲಯದಲ್ಲಿ ತೀವ್ರಗೊಂಡಿರುವಾಗಲೇ ಇತ್ತ ಈ ಚಿತ್ರ ಥೇಟರಿನತ್ತ ಮುಖ ಮಾಡಿ ನಿಂತಿದೆ. ಇದೀಗ ರಾಕಿಂಗ್ ಸ್ಟಾರ್ ಯಶ್ ಈ ಸಿನಿಮಾದ ಟ್ರೇಲರ್ ಲಾಂಚ್ ಮಾಡೋ ಮೂಲಕ ಶೀಘ್ರದಲ್ಲಿಯೇ ಕಿಸ್ ಥೇಟರು ಸೇರಿಕೊಳ್ಳಬಹುದೆಂಬ ಭರವಸೆಯೂ ಮೂಡಿಕೊಂಡಿದೆ. ಜೊತೆಗೆ ಈ ಟ್ರೇಲರ್ ಮೂಡಿ ಬಂದಿರೋ ರೀತಿಗೆ ಪ್ರೇಕ್ಷಕರೆಲ್ಲ ಮನಸೋತಿದ್ದಾರೆ.
ಎ.ಪಿ ಅರ್ಜುನ್ ನಿರ್ದೇಶನದ ಕಿಸ್ ಟ್ರೇಲರ್ ಅನ್ನು ಬಿಡುಗಡೆಗೊಳಿಸಿದ ರಾಕಿಂಗ್ ಸ್ಟಾರ್ ಅದನ್ನು ನೋಡಿ ಥ್ರಿಲ್ ಆಗಿದ್ದಾರೆ. ಇದೀಗ ಕೆಜಿಎಫ್-2 ಚಿತ್ರೀಕರಣದಲ್ಲಿ ಬ್ಯುಸಿಯಾಗಿರೋ ಯಶ್ ಅದರ ನಡುವೆಯೂ ಬಿಡುವು ಮಾಡಿಕೊಂಡು ಕಿಸ್ಗೆ ಸಾಥ್ ಕೊಟ್ಟಿದ್ದಾರೆ.
webdunia

ಇಡೀ ಚಿತ್ರತಂಡಕ್ಕೆ ಶುಭಕೋರಿ, ದೊಡ್ಡ ಗೆಲುವು ಸಿಗಲೆಂದೂ ಹಾರೈಸಿದ್ದಾರೆ. ಹೀಗೆ ಈ ಟ್ರೇಲರ್ ಅನಾವರಣಗೊಂಡು ಗಂಟೆ ಕಳೆಯೋದರೊಳಗಾಗಿ ಅದಕ್ಕೆ ಸಿಕ್ಕಿರೋ ಪ್ರತಿಕ್ರಿಯೆಗಳೇ ಕಿಸ್ ಗೆಲುವಿಗೆ ಕನ್ನಡಿ ಹಿಡಿದಂತಿದೆ.
webdunia
ಅಂಬಾರಿಯಿಂದ ಮೊದಲ್ಗೊಂಡು ಈ ವರೆಗೂ ಎ.ಪಿ ಅರ್ಜುನ್ ನವಿರಾದ ಪ್ರೇಮಕಾವ್ಯದಂಥಾ ಚಿತ್ರಗಳಿಗೆ ಹೆಸರಾಗಿರುವವರು. ಈ ಸಿನಿಮಾ ಹೆಸರೇ ಹೇಳುವಂತೆ ಇದೊಂದು ಪ್ರೇಮಕಥೆಯಾಧಾರಿತ ಚಿತ್ರವೆಂಬ ಅಂದಾಜು ಆರಂಭದಲ್ಲಿಯೇ ಸಿಕ್ಕಿತ್ತು. ಅದು ಹೇಗೆ ಮೂಡಿ ಬಂದಿದೆಯೆಂಬ ಬಗ್ಗೆ ಈ ಟ್ರೇಲರ್ ಸ್ಪಷ್ಟ ಚಿತ್ರಣವನ್ನೇ ಕಟ್ಟಿ ಕೊಟ್ಟಿದೆ.
webdunia

ಇಲ್ಲಿ ವಿರಾಟ್ ಮತ್ತು ಶ್ರೀಲೀಲಾ ಮುದ್ದಾದ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಮೊದಲ ಮುತ್ತಿನ ರೋಮಾಂಚನದೊಂದಿಗೆ ಹರಡಿಕೊಳ್ಳುವ ಈ ಪ್ರೇಮ ಕಥೆಯಲ್ಲಿ ಆಕ್ಷನ್ ಸೀನುಗಳೂ ಇವೆ ಮತ್ತು ಅದಕ್ಕೆ ಪೂರಕವಾದ ಕಥಾನಕವೂ ಇದೆಯೆಂಬುದನ್ನೂ ಈ ಟ್ರೇಲರ್ ಸಾರಿ ಹೇಳುವಂತಿದೆ.
webdunia
ಈ ಟ್ರೇಲರ್ ನೋಡಿ ಶೀಘ್ರದಲ್ಲಿಯೇ ಕಿಸ್ ಬಿಡುಗಡೆಯಾಗಲಿದೆ ಅನ್ನೋ ಭರವಸೆಯೂ ಪ್ರೇಕ್ಷಕರಲ್ಲಿ ಹುಟ್ಟಿಕೊಂಡಿದೆ. ಅನೇಕರು ಆದಷ್ಟು ಬೇಗನೆ ಈ ಸಿನಿಮಾ ಬಿಡುಗಡೆ ಮಾಡುವಂತೆಯೂ ಕಮೆಂಟುಗಳ ಮೂಲಕ ಒತ್ತಾಯಿಸುತ್ತಿದ್ದಾರೆ. ಲಾಂಚ್ ಆಗಿ ಗಂಟೆ ಕಳೆಯೋದರೊಳಗೆ ಹೆಚ್ಚು ಹೆಚ್ಚು ವೀಕ್ಷಣೆ ಪಡೆಯುತ್ತಾ ಈ ಟ್ರೇಲರ್ ಹಿಟ್ ಆಗುವತ್ತ ದಾಪುಗಾಲಿಡುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

‘ಅವನಿಗೆ ಎರಡು ಹೆಂಡ್ತೀರು ಇಲ್ವಾ?’ ರವಿಬೆಳಗರೆ ವಿರುದ್ಧ ನಟ ದುನಿಯಾ ವಿಜಯ್ ಕಿಡಿ