Select Your Language

Notifications

webdunia
webdunia
webdunia
webdunia

‘ಅವನಿಗೆ ಎರಡು ಹೆಂಡ್ತೀರು ಇಲ್ವಾ?’ ರವಿಬೆಳಗರೆ ವಿರುದ್ಧ ನಟ ದುನಿಯಾ ವಿಜಯ್ ಕಿಡಿ

‘ಅವನಿಗೆ ಎರಡು ಹೆಂಡ್ತೀರು ಇಲ್ವಾ?’ ರವಿಬೆಳಗರೆ ವಿರುದ್ಧ ನಟ ದುನಿಯಾ ವಿಜಯ್ ಕಿಡಿ
ಬೆಂಗಳೂರು , ಶನಿವಾರ, 24 ಆಗಸ್ಟ್ 2019 (09:47 IST)
ಬೆಂಗಳೂರು: ತಮ್ಮ ಹಾಗೂ ನಟ ದರ್ಶನ್ ಖಾಸಗಿ ಬದುಕಿನ ಬಗ್ಗೆ ಯೂ ಟ್ಯೂಬ್ ಚಾನೆಲ್ ನಲ್ಲಿ ಮಾತನಾಡಿರುವ ಪತ್ರಕರ್ತ, ಲೇಖಕ ರವಿ ಬೆಳಗರೆ ವಿರುದ್ಧ ನಟ ದುನಿಯಾ ವಿಜಯ್ ಕಿಡಿ ಕಾರಿದ್ದಾರೆ.


ನಟ ಧನಂಜಯ್ ಅಭಿನಯದ ಬಡವ ರಾಸ್ಕಲ್ ಸಿನಿಮಾ ಮುಹೂರ್ತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದುನಿಯಾ ವಿಜಯ್ ಗೆ ಪತ್ರಕರ್ತರು ರವಿಬೆಳಗರೆ ಮಾತನಾಡಿರುವ ವಿಚಾರದ ಬಗ್ಗೆ ಪ್ರಸ್ತಾಪ ಮಾಅಡಿದ್ದರು. ನಟ ದರ್ಶನ್ ಹೆಂಡತಿಗೆ ಹೊಡೆದ ವಿಚಾರ ಮತ್ತು ದುನಿಯಾ ವಿಜಯ್ ಇಬ್ಬರು ಹೆಂಡತಿಯರನ್ನು ಹೊಂದಿರುವ  ವಿಚಾರದ ಕುರಿತಂತೆ ರವಿಬೆಳಗರೆ ಟೀಕೆ ಮಾಡಿದ್ದರು.

ಇದರ ಬಗ್ಗೆ ಪರ್ತಕರ್ತರು ಕೇಳಿದಾಗ ದುನಿಯಾ ವಿಜಯ್ ‘ರವಿಬೆಳಗರೆಗೇ ಇಬ್ಬರು ಹೆಂಡ್ತೀರು, ನಾಲ್ಕು ಮಕ್ಳು. ಪ್ರಜ್ಞೆ ಇಲ್ಲ ಅವನಿಗೆ. ಒಮ್ಮೆ ಪುಲ್ವಾಮಾ ಅಂತಾನೆ, ಒಮ್ಮೆ ಯಾರ್ದೋ ಹೆಂಡ್ತಿ ಗಲಾಟೆ ಅಂತಾನೆ. ಅವನಿಗೇನಾದ್ರೂ ಪ್ರಾಬ್ಲಂ ಇದ್ಯಾ? ಅವನ ವಯಸ್ಸಿಗೊಂದು ಮರ್ಯಾದೆ ಇರ್ಬೇಕಲ್ವಾ? ತಿಂಗಳಿಗೆ ಇಪ್ಪತ್ತು ದಿವಸ ಕುಡಿದು ಮಾನಸ ಆಸ್ಪತ್ರೆಯಲ್ಲಿ ಮಲಗಿರ್ತಾನೆ. ಪ್ರಜ್ಞೆ ಬಂದಾಗ ವಿಜಯ್ ಹೆಂಡ್ತಿ, ದರ್ಶನ್ ಹೆಂಡ್ತಿ ಅಂತ ಬರೀತಾನೆ. ಅವನ ಹೆಂಡ್ತಿ ಅವನಿಗೆ ಕಾಣಲ್ವಾ? ಮೊದಲು ಅವನು ಸರಿ ಇರಬೇಕು. ಮತ್ತೆ ಇನ್ನೊಬ್ಬರ ಬಗ್ಗೆ ಮಾತನಾಡಬೇಕು. ಅವನಿಗೆ ಇದೇ ಲಾಸ್ಟ್ ವಾರ್ನಿಂಗ್’ ಎಂದು ವಿಜಯ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಿರಂಜೀವಿ ಜತೆ ಡ್ಯಾನ್ಸ್ ಟ್ರೋಲ್ ಗೆ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ನೀಡಿದ ಸುಮಲತಾ ಅಂಬರೀಶ್