ಬೆಂಗಳೂರು: ಇತ್ತೀಚೆಗಷ್ಟೇ ಗೋಲ್ಡನ್ ಸ್ಟಾರ್ ಗಣೇಶ್ ಗೀತಾ ಸಿನಿಮಾಗಾಗಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಡೊಂದನ್ನು ಹಾಡಿದ್ದನ್ನು ಓದಿಕೊಂಡಿರುತ್ತೀರಿ.
									
										
								
																	
ಈಗ  ಅದರ ಜತೆಗೇ ಮತ್ತೊಬ್ಬ ಸ್ಟಾರ್ ಗೆ ಪುನೀತ್ ಹಾಡಿದ ಸುದ್ದಿ ಬಹಿರಂಗವಾಗಿದೆ. ಗೀತಾ ಸಿನಿಮಾಗಾಗಿ ಪುನೀತ್ ಕನ್ನಡದ ಬಗ್ಗೆ ಇರುವ ಹಾಡೊಂದನ್ನು ಹಾಡಿದ್ದರು.
									
			
			 
 			
 
 			
			                     
							
							
			        							
								
																	ಅದರ ಜತೆಗೇ ಪುನೀತ್ ನೆನೆಪಿರಲಿ ಪ್ರೇಮ್ ಸಿನಿಮಾಗಾಗಿಯೂ ಹಾಡಿದ್ದಾರೆ. ಆ ವಿಚಾರವನ್ನು ಈಗ ಸ್ವತಃ ಪುನೀತ್ ಬಹಿರಂಗಪಡಿಸಿದ್ದಾರೆ. ಪ್ರೇಮ್ ಸದ್ಯಕ್ಕೆ ಪ್ರೇಮಂ ಪೂಜ್ಯಂ ಸಿನಿಮಾ ಮಾಡುತ್ತಿದ್ದು ಅದೇ ಸಿನಿಮಾಗಾಗಿ ಅಪ್ಪು ಹಾಡಿರಬಹುದು ಎನ್ನಲಾಗಿದೆ.