Select Your Language

Notifications

webdunia
webdunia
webdunia
webdunia

ಪ್ರಭುದೇವ ಜತೆ ಯೋಗರಾಜ್ ಭಟ್! ಸದ್ಯದಲ್ಲೇ ಗುಡ್ ನ್ಯೂಸ್ ಎಂದ ಭಟ್ರು

ಪ್ರಭುದೇವ ಜತೆ ಯೋಗರಾಜ್ ಭಟ್! ಸದ್ಯದಲ್ಲೇ ಗುಡ್ ನ್ಯೂಸ್ ಎಂದ ಭಟ್ರು
ಬೆಂಗಳೂರು , ಶನಿವಾರ, 24 ಆಗಸ್ಟ್ 2019 (09:05 IST)
ಬೆಂಗಳೂರು: ದಕ್ಷಿಣ ಭಾರತದ ಖ್ಯಾತ ನಟ, ನಿರ್ದೇಶಕ ಪ್ರಭುದೇವ ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ 2 ಸಿನಿಮಾದಲ್ಲಿ ಅಭಿನಯಿಸಬಹುದು ಎಂಬ ಸುದ್ದಿ ಕೇಳಿಬರುತ್ತಿತ್ತು.


ಆದರೆ ಈ ಬಗ್ಗೆ ಚಿತ್ರತಂಡದಿಂದ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಆದರೆ ಈಗ ಯೋಗರಾಜ್ ಭಟ್ ಪ್ರಭುದೇವ ಜತೆಗಿರುವ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಪ್ರಕಟಿಸಿದ್ದು, ಈ ಶ್ರೇಷ್ಠ ವ್ಯಕ್ತಿಯನ್ನು ಭೇಟಿ ಮಾಡಿದೆ. ಸದ್ಯದಲ್ಲೇ ನಿಮಗೆ ಗುಡ್ ನ್ಯೂಸ್ ಕಾದಿದೆ ಎಂದು ಸುಳಿವು ಕೊಟ್ಟಿದ್ದಾರೆ.

ಈ ಮೂಲಕ ಗಾಳಿಪಟ 2 ಕ್ಕೆ ಪ್ರಭುದೇವರನ್ನು ಕರೆತರುವುದು ಪಕ್ಕಾ ಆಗಿದೆ. ಆದರೆ ಭಟ್ಟರು ಈ ಬಗ್ಗೆ ಅಧಿಕೃತ ಅನೌನ್ಸ್ ಮಾಡಿದ ಬಳಿಕವಷ್ಟೇ ಪ್ರಭುದೇವ ಪಾತ್ರವೇನು ಎಂದು ತಿಳಿಯಲಿದೆ. ಗೋಲ್ಡನ್ ಸ್ಟಾರ್ ಗಣೇಶ್ ಈ ಸಿನಿಮಾಗೆ ನಾಯಕರು.

Share this Story:

Follow Webdunia kannada

ಮುಂದಿನ ಸುದ್ದಿ

ಭಾನುವಾರ ಸೃಜನ್ ಲೋಕೇಶ್ ಎಲ್ಲಿದ್ದೆ ಇಲ್ಲಿ ತನಕ ಅಡಿಯೋ ಲಾಂಚ್