Select Your Language

Notifications

webdunia
webdunia
webdunia
webdunia

ಕಾಮಿಡಿ ಕಿಂಗ್ ಶರಣ್ ಜತೆ ಯೋಗರಾಜ್ ಭಟ್ ಸಿನಿಮಾ

ಕಾಮಿಡಿ ಕಿಂಗ್ ಶರಣ್ ಜತೆ ಯೋಗರಾಜ್ ಭಟ್ ಸಿನಿಮಾ
ಬೆಂಗಳೂರು , ಭಾನುವಾರ, 4 ಆಗಸ್ಟ್ 2019 (08:47 IST)
ಬೆಂಗಳೂರು: ಎಲ್ಲವೂ ಸರಿ ಹೋಗಿದ್ದರೆ ಯೋಗರಾಜ್ ಭಟ್ ಗಾಳಿಪಟ 2 ರಲ್ಲಿ ಶರಣ್ ನಾಯಕರಾಗಬೇಕಿತ್ತು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ಗಾಳಿಪಟ2 ರಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗುತ್ತಿದ್ದಾರೆ.


ಗಾಳಿಪಟ ಮೊದಲ ಭಾಗದಲ್ಲಿ ಗಣೇಶ್ ಅಭಿನಯ ಇಷ್ಟಪಟ್ಟಿದ್ದ ಅಭಿಮಾನಿಗಳು ಎರಡನೇ ಭಾಗದಲ್ಲೂ ಅವರನ್ನೇ ನಾಯಕರಾಗಿ ಮಾಡಿ ಎಂದು ಯೋಗರಾಜ್ ಭಟ್ ಗೆ ಒತ್ತಾಯಿಸಿದ್ದರು. ಈ ಮೊದಲು ಗಾಳಿಪಟ 2 ರಲ್ಲಿ ಶರಣ್ ನಾಯಕ ಎಂದು ಭಟ್ಟರು ಹೇಳಿಕೊಂಡಿದ್ದರು. ಆದರೆ ಅಭಿಮಾನಿಗಳ ಒತ್ತಾಯದಿಂದಾಗಿ ಶರಣ್ ಗೆ ಈ ಅವಕಾಶ ಕೈ ತಪ್ಪಿ ಹೋಯಿತು.

ಆದರೆ ತಮ್ಮ ಮೇಲೆ ಭರವಸೆಯಿಟ್ಟಿದ್ದ ಶರಣ್ ಗೆ ಬೇಸರ ಮಾಡಬಾರದು ಎಂದು ಭಟ್ರು ಈಗ ಶರಣ್ ಜತೆ ಮತ್ತೊಂದು ಸಿನಿಮಾ ಮಾಡಲಿದ್ದಾರಂತೆ. ಗಾಳಿಪಟ 2 ಆದ ಮೇಲೆ ಶರಣ್ ಜತೆ ಮತ್ತೊಂದು ಸಿನಿಮಾ ಮಾಡುವುದಾಗಿ ಯೋಗರಾಜ್ ಭಟ್ ಘೋಷಿಸಿದ್ದಾರೆ. ಅಲ್ಲಿಗೆ ಗಾಳಿಪಟ ಸಿನಿಮಾದಲ್ಲಿ ಶರಣ್ ಆದ ಅನ್ಯಾಯಕ್ಕೆ ನ್ಯಾಯ ದೊರಕಿಸಿಕೊಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹರಿಪ್ರಿಯಾ ‘ಕನ್ನಡ್ ಗೊತ್ತಿಲ್ಲ’ ಟೀಸರ್ ಆಗಸ್ಟ್ 6 ಕ್ಕೆ