Select Your Language

Notifications

webdunia
webdunia
webdunia
Wednesday, 9 April 2025
webdunia

ಕಾಪು ಮಾರಿಗುಡಿ ದೇವಸ್ಥಾನಕ್ಕೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಭೇಟಿ

Ashwini Puneeth Rajkumar, Kaapu Marigudi Temple, Udupi,

Sampriya

ಉಡುಪಿ , ಗುರುವಾರ, 3 ಏಪ್ರಿಲ್ 2025 (19:36 IST)
Photo Courtesy X
ಉಡುಪಿ: ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಇಂದು ಉಡುಪಿಯ ಕಾಫು ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ವೇಳೆ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

ಈ ವೇಳೆ ದೇವಸ್ಥಾನದ ಆಡಳಿತ ಮಂಡಳಿ ಅಶ್ವಿನಿ ಅವರಿಗೆ ದೇವಸ್ಥಾನದ ವಿಶೇಷತೆ ಬಗ್ಗೆ ಹೇಳಿದರು. ಕಾಪು ಮಾರಿಯಮ್ಮನ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದ್ದಾರೆ. ಈ ವೇಳೆ, ಸಂಪೂರ್ಣ ಜೀರ್ಣೋದ್ಧಾರವಾಗಿರುವ ದೇಗುಲವನ್ನು ವೀಕ್ಷಣೆ ಮಾಡಿದ್ದಾರೆ. ಬಳಿಕ ನವದುರ್ಗ ಲೇಖನ ಪುಸ್ತಕ ಪಡೆದುಕೊಂಡಿದ್ದಾರೆ.

ದೇವಿ ದರ್ಶನದ ಬಳಿಕ ದೇಗುಲದ ಪ್ರಧಾನ ಅರ್ಚಕರು ಪ್ರಸಾದ ನೀಡಿ ಅವರನ್ನು ಗೌರವಿಸಿದ್ದಾರೆ.

ಇತ್ತೀಚೆಗೆ ಕಾಪು ಮಾರಿಯಮ್ಮನ ದೇವಸ್ಥಾನಕ್ಕೆ ಪೂಜಾ ಹೆಗ್ಡೆ, ಶಿಲ್ಪಾ ಶೆಟ್ಟಿ, ಕಂಗನಾ ರಣಾವತ್ ಸೇರಿದಂತೆ ಅನೇಕರು ಭೇಟಿ ನೀಡಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ಮನೆಗೆ ಕಾಲಿಟ್ಟ ನಟ ದಿಲೀಪ್ ಶೆಟ್ಟಿ, ಗೃಹ ಪ್ರವೇಶದಲ್ಲಿ ಗಮನ ಸೆಳೆದ ನೀನಾದೆನಾ ಜೋಡಿ