Select Your Language

Notifications

webdunia
webdunia
webdunia
webdunia

ಜಮ್ಮುವಿನಲ್ಲಿ ಸೇನಾ ವಾಹನ ಅಪಘಾತ: ಕುಂದಾಪುರದ ಯೋಧ ಸೇರಿ ರಾಜ್ಯದ ಮೂವರು ಹುತಾತ್ಮ

Jammu Kashmir Road Accident, Udupi Solgier No More, Karnataka Three Solgiers No More

Sampriya

ಜಮ್ಮು ಕಾಶ್ಮೀರ , ಬುಧವಾರ, 25 ಡಿಸೆಂಬರ್ 2024 (16:04 IST)
Photo Courtesy X
ಜಮ್ಮು- ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಪೂಂಛ್‌ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಮಂಗಳವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕರ್ನಾಟಕದ ಮೂವರು ಯೋಧರು ಸೇರಿ ಒಟ್ಟು ಐವರು ಯೋಧರು ಮೃತಪಟ್ಟಿದ್ದಾರೆ.

ಇದರಲ್ಲಿ ಕುಂದಾಪುರದ ಬೀಝಾಡಿಯ ಯೋಧ ಅನೂಪ್ ಪೂಜಾರಿ (31) ಅವರು ಕೂಡಾ ಸಾವನ್ನಪ್ಪಿದ್ದಾರೆ.

13ವರ್ಷಗಳ ಹಿಂದೆ ಸೇನೆಗೆ ಸೇರಿದ್ದ ಅನೂಪ್‌ಗೆ  ಪತ್ನಿ ಹಾಗೂ ಎರಡು ವರ್ಷದ ಹೆಣ್ಣು ಮಗುವಿದೆ. ರಜೆಯಲ್ಲಿ ಊರಿಗೆ ಬಂದಿದ್ದ ಅನೂಪ್ ಅವರು ಡಿ.21ರಂದು ಕೆಲಸಕ್ಕೆ ವಾಪಾಸ್ಸಾಗಿದ್ದರು.

ಇನ್ನೂ ಈ ಅಪಘಾತದಲ್ಲಿ ಕರ್ನಾಟಕದ ಬೆಳಗಾವಿ ಬಳಿಯ ಸಾಂಬ್ರಾ ಗ್ರಾಮದ ಸುಬೇದಾರ್‌ ದಯಾನಂದ ತಿರಕಣ್ಣವರ (45), ಮಹಾಲಿಂಗಪುರದ  ಮಹೇಶ್ ಮರಿಗೊಂಡ (25) ಅವರು ಸಾವನ್ನಪ್ಪಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜನಪ್ರತಿನಿಧಿಗಳಿಗೆ ರಕ್ಷಣೆ ಇಲ್ಲವೆಂದ ಮೇಲೆ ಜನಸಾಮಾನ್ಯರ ಗತಿಯೇನು: ಬಿಜೆಪಿ