ನೀನಾದೆ ನಾ ಸೀರಿಯಲ್ ಖ್ಯಾತಿಯ ನಟ ದಿಲೀಪ್ ಶೆಟ್ಟಿ ಅವರ ಗೃಹ ಪ್ರವೇಶ ಈಚೆಗೆ ಅದ್ಧೂರಿಯಾಗಿ ನೆರವೇರಿತು. ಈ ಸಮಾರಂಭದಲ್ಲಿ ಬಿಗ್‌ಬಾಸ್ ಖ್ಯಾತಿಯ ಭವ್ಯ ಗೌಡ, ನಟ ರಘು-ಅಮೃತಾ ದಂಪತಿ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಭಾಗಿಯಾದರು. ಅದಲ್ಲದೆ ಸುವರ್ಣ ಸ್ಟಾರ್ ಸೀರಿಯಲ್‌ನ ನಟ ನಟಿಯರು ಭಾಗಿಯಾಗಿ, ದಿಲೀಪ್ ಶೆಟ್ಟಿಗೆ ಶುಭಕೋರಿದರು.
ಇನ್ನೂ ವಿಶೇಷ ಏನೆಂದರೆ ಈ ಗೃಹಪ್ರವೇಶದಲ್ಲಿ ನಟಿ ಖುಷಿ ಶಿವು ಕೂಡಾ ಭಾಗಿಯಾಗಿದ್ದಾರೆ. ನೀನಾದೆ ನಾ ಸೀರಿಯಲ್ ಮೂಲಕ ಜೋಡಿಯಾಗಿ ಎಲ್ಲರ ಮನ ಗೆದ್ದಿರುವ ದಿಲೀಪ್ ಶೆಟ್ಟಿ- ಖುಷಿ ಜೋಡಿ ರಿಯಲ್ ಲೈಫ್‌ನಲ್ಲೂ ಜೋಡಿಯಾಗ್ತಾರಾ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.
ಉತ್ತಮ ಸ್ನೇಹಿತರಾಗಿರುವ ದಿಲೀಪ್ ಹಾಗೂ ಖುಷಿ ಅವರು ತಮ್ಮ ಕುಟುಂಬದ ಜತೆ ಟ್ರಿಪ್ ಹೋಗುತ್ತಿರುತ್ತಾರೆ. ಈ ಜೋಡಿ ಮಧ್ಯೆ ಸ್ನೇಹಕ್ಕೂ ಮೀರಿದ ಗೆಳತವಿದೆ ಎಂದು ನೆಟ್ಟಿಗರು ಹೇಳುತ್ತಿರುತ್ತಾರೆ.
ಇದೀಗ ಗೃಹಪ್ರವೇಶ ಸಮಾರಂಭದಲ್ಲೂ ಖುಷಿ, ದಿಲೀಪ್‌ಗೆ ಮ್ಯಾಚಿಂಗ್ ಆಗುವ ಸಾರಿಯುಟ್ಟು ಫೋಸ್ ನೀಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಗೃಹಪ್ರವೇಶದ ವಿಡಿಯೋ, ಫೋಟೋಗಳು ವೈರಲ್ ಆಗಿದೆ.