Select Your Language

Notifications

webdunia
webdunia
webdunia
webdunia

ಐಷರಾಮಿ ಮನೆಯ ಒಡತಿಯಾದ ಪ್ರಿಯಾಂಕ ಚಿಂಚೋಳಿ: ಗೃಹಪ್ರವೇಶದ ಫೋಟೋ ಹಂಚಿಕೊಂಡ 'ಮನಸೆಲ್ಲ' ನಟಿ

ಐಷರಾಮಿ ಮನೆಯ ಒಡತಿಯಾದ ಪ್ರಿಯಾಂಕ ಚಿಂಚೋಳಿ: ಗೃಹಪ್ರವೇಶದ ಫೋಟೋ ಹಂಚಿಕೊಂಡ 'ಮನಸೆಲ್ಲ' ನಟಿ

Sampriya

ಬೆಂಗಳೂರು , ಶನಿವಾರ, 13 ಏಪ್ರಿಲ್ 2024 (17:47 IST)
photo Courtesy Instagram
ಬೆಂಗಳೂರು: ಮನಸೆಲ್ಲ ಧಾರಾವಾಹಿಯ ಮೂಲಕ ಜನಮನ್ನಣೆ ಗಳಿಸಿದ ಪ್ರಿಯಾಂಕ ಚಿಂಚೋಳಿ ಅವರು ಹೊಸ ಐಷರಾಮಿ ಮನೆಯ ಗೃಹಪ್ರವೇಶ ಈಚೆಗೆ ನಡೆದಿದೆ. ನಟಿ ಸಂಭ್ರಮದ ಕ್ಷಣಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ನಮ್ಮೆಲ್ಲರ ಕಡೆಯಿಂದ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು ಎಂದು ಬರೆದುಕೊಂದು, ಫೋಟೋಗಳ ರೀಲ್ಸ್‌ನ್ನು ಹಂಚಿಕೊಂಡಿದ್ದಾರೆ.

ಗೋ ಪೂಜೆ, ತೋರಣ ಪೂಜೆ ನೇರವೇರಿಸಿದ ದಂಪತಿ ಫೋಟೋಗೆ ಪೋಸ್ ನೀಡಿದ್ದಾರೆ. ಪ್ರಿಯಾಂಕ ಅವರು 2021 ಡಿಸೆಂಬರ್ 10 ರಂದು ಬೆಂಗಳೂರಿನ ರಾಕೇಶ್ ಎಂಬವರನ್ನು ಮದುವೆಯಾದರು. ಇನ್ನೂ ಇವರದ್ದು ಆರೇಜ್ ಮ್ಯಾರೇಜ್ ಆಗಿದ್ದು, ರಾಕೇಶ್ ಅವರು ಅಮೇರಿಕಾದ ಬ್ಯಾಂಕ್‌ವೊಂದರಲ್ಲಿ ಉಪಾಧ್ಯಕ್ಷರಾಗಿದ್ದಾರೆ.

ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ 'ಹರ ಹರ ಮಹಾದೇವ' ಧಾರಾವಾಹಿಯ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ಈ ಧಾರಾವಾಹಿಯಲ್ಲಿ ಪಾರ್ವತಿ ಪಾತ್ರವನ್ನು ನಿರ್ವಹಿಸಿದ್ದರು. ಅವರು ಉದಯ ಟಿವಿಯಲ್ಲಿನ ಪ್ರಸಿದ್ಧ ಕನ್ನಡ ಧಾರಾವಾಹಿಗಳಾದ ಜೈ ಹನುಮಾನ್ ಮತ್ತು ಮನಸಾರೆ ಮತ್ತು ಸ್ಟಾರ್ ಸುವರ್ಣದಲ್ಲಿ ಮನಸೆಲ್ಲಾ ನೀನೆ ಸೇರಿದಂತೆ ಅನೇಕ ಧಾರವಾಹಿಗಳಲ್ಲಿ ನಟಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

24 ವರ್ಷದಲ್ಲಿ ಇದೆಲ್ಲಾ ಬೇಕಿತ್ತಾ ಅನಿಸ್ತು, ಜೈಲು ಅನುಭವದ ವಿಡಿಯೋ ಹಂಚಿಕೊಂಡ ಸೋನು ಗೌಡ