ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ನಾಯಕರಾಗಿರುವ ಜೈಲರ್ ಸಿನಿಮಾ ಬಾಕ್ಸ್ ಆಫಿಸ್ ನಲ್ಲಿ ಯಶಸ್ವಿಯಾಗಿತ್ತು. ಇದೀಗ ಚಿತ್ರತಂಡ ಎರಡನೇ ಭಾಗ ನಿರ್ಮಿಸಲು ತಯಾರಿ ನಡೆಸಿದೆ.
ಜೈಲರ್ ಸಿನಿಮಾವನ್ನು ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶಿಸಿದ್ದರು. ಇದೀಗ ನೆಲ್ಸನ್ ಎರಡನೇ ಭಾಗ ನಿರ್ಮಿಸಲು ರಜನಿ ಒಪ್ಪಿಗೆ ಪಡೆದಿದ್ದಾರೆ. ಇದಕ್ಕೆ ರಜನಿ ಕೂಡಾ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಜೈಲರ್ 2 ಸ್ಕ್ರಿಪ್ಟ್ ಕೆಲಸಗಳು ಈಗಾಗಲೇ ಶುರುವಾಗಿದೆ.
ಜೈಲರ್ ಎರಡನೇ ಭಾಗಕ್ಕೆ ಹುಕುಂ ಎಂದು ಶೀರ್ಷಿಕೆ ಫಿಕ್ಸ್ ಆಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಸಿನಿಮಾ 250 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿದೆಯಂತೆ. ಇದೇ ವರ್ಷ ಜೂನ್ ನಲ್ಲಿ ಸಿನಿಮಾದ ಪ್ರಿ ಪ್ರೊಡಕ್ಷನ್ ಕೆಲಸಗಳು ಶುರುವಾಗಲಿದೆ ಎಂಬ ಮಾಹಿತಿಯಿದೆ.
ಜೈಲರ್ ಮೊದಲ ಭಾಗದಲ್ಲಿ ಕನ್ನಡ ನಟ ಶಿವರಾಜ್ ಕುಮಾರ್, ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ನಟಿಸಿದ್ದರು. ಶಿವಣ್ಣನಿಗೆ ಇದು ಮೊದಲ ತಮಿಳು ಸಿನಿಮಾವಾಗಿತ್ತು. ಈಗ ಎರಡನೇ ಭಾಗದಲ್ಲೂ ಈ ಪಾತ್ರಗಳು ಇರಲಿವೆಯಾ ಎಂದು ಕುತೂಹಲವಿದೆ.