Select Your Language

Notifications

webdunia
webdunia
webdunia
Sunday, 13 April 2025
webdunia

ಟಗರು ಪುಟ್ಟಿಗೆ ಕೂಡಿಬಂದ 'ಕಂಕಣ ಭಾಗ್ಯ': ಮೇ 1ರಂದು ಅರುಣ್ ಕುಮಾರ್‌ನ್ನು ವರಿಸಲಿರುವ ಮಾನ್ವಿತಾ

Kendasampige Heroin Manwitha Kamath

Sampriya

ಬೆಂಗಳೂರು , ಶುಕ್ರವಾರ, 12 ಏಪ್ರಿಲ್ 2024 (19:44 IST)
Photo Courtesy X
ಬೆಂಗಳೂರು: ಕನ್ನಡದ ಟಗರು ಪುಟ್ಟಿ ಖ್ಯಾತಿಯ ನಟಿ ಮಾನ್ವಿತಾ ಕಾಮತ್ ಹಸೆಮಣೆ ಏರಲು ಸಜ್ಜಾಗಿದ್ದಾರೆ.

ಮೇ 1ರಂದು  ಸಂಗೀತ ನಿರ್ದೇಶಕ ಅರುಣ್ ಕುಮಾರ್ ಅವರನ್ನು ಮಾನ್ವಿತಾ ವಿವಾಹವಾಗಲಿದ್ದಾರೆ. ಇವರ ಮದುವೆ ಸಮಾರಂಭ ಮಂಗಳೂರಿನಲ್ಲಿ ಜರುಗಲಿದೆ. ಏಪ್ರಿಲ್ 29ರಂದು ಹಳದಿ ಶಾಸ್ತ್ರ ಹಾಗೂ ಏಪ್ರಿಲ್ 30ರಂದು ಸಂಗೀತ್ ಕಾರ್ಯಕ್ರಮ ನಡೆಯಲಿದೆ.

ಮದುವೆ ಕುರಿತಾದ ಡಿಜಿಟಲ್ ಆಮಂತ್ರಣ ಪತ್ರಿಕೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದ್ದಾರೆ.

ಆರ್.ಜೆಯಾಗಿ ವೃತ್ತಿಯನ್ನು ಆರಂಭಿಸಿದ್ದ ಮಾನ್ವಿತಾ ಆನಂತರ ಸಿನಿಮಾ ರಂಗಕ್ಕೆ ಬಂದರು. ಸೂರಿ ನಿರ್ದೇಶನದ ಕೆಂಡ ಸಂಪಿಗೆ ಸಿನಿಮಾ ಅವರಿಗೆ ಹೆಸರು ತಂದುಕೊಟ್ಟಿತು. ಆನಂತರ ಟಗರು ಸಿನಿಮಾದ ಮೂಲಕ ಸಾಕಷ್ಟು ಜನಕ್ಕೆ ಪರಿಚಯವಾದರು. ಅಲ್ಲಿಂದ ಟಗರು ಪುಟ್ಟಿ ಹೆಸರು ಗಳಿಸಿದ್ದು, ಸದ್ಯ ಕನ್ನಡದ ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಿಯಾಮಣಿ ಸೊಂಟದ ವಿಷ್ಯ ಬೋನಿ ಕಪೂರ್‌ಗೆ ಬೇಕಿತ್ತಾ