Select Your Language

Notifications

webdunia
webdunia
webdunia
webdunia

ಹೊಸ ಮನೆ ಕಟ್ಟಿಸಿದ ನಟ ಅಜಯ್ ರಾವ್: ಗೃಹಪ್ರವೇಶಕ್ಕೆ ನಟ ಯಶ್ ಸೇರಿದಂತೆ ಸೆಲೆಬ್ರಿಟಿಗಳಿಗೆ ಆಹ್ವಾನ

Kannada Hero Ajay Rao

Sampriya

ಬೆಂಗಳೂರು , ಶುಕ್ರವಾರ, 12 ಏಪ್ರಿಲ್ 2024 (14:04 IST)
Photo Courtesy X
ಬೆಂಗಳೂರು: ಕನ್ನಡದ ನಟ ಅಜಯ್ ರಾವ್ ಅವರು ಹೊಸ ಮನೆಯನ್ನು ಕಟ್ಟಿಸಿದ್ದು, ಅದರ ಗೃಹಪ್ರವೇಶಕ್ಕೆ ಕನ್ನಡ ಚಿತ್ರರಂಗದ ಗಣ್ಯರ ಮನೆಗೆ ತೆರಳಿ  ಗೃಹಪ್ರವೇಶಕ್ಕೆ ಆಹ್ವಾನಿಸುತ್ತಿದ್ದಾರೆ.

ಎಕ್ಸ್‌ಕ್ಯೂಸ್‌ಮಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅಜಯ್‌ಗೆ ದೊಡ್ಡ ಹೆಸರು ತಂದುಕೊಟ್ಟಿತು. ಇದೀಗ ಅಜಯ್ ರಾವ್ ಅವರು ಕನ್ನಡ ಚಿತ್ರರಂಗದಲ್ಲಿ 21 ವರ್ಷವನ್ನೂ ಪೂರೈಸಿದ್ದಾರೆ.

 ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಮನೆಗೆ ಅಜಯ್ ದಂಪತಿ ತೆರಳಿ ಆಹ್ವಾನಿಸಿದ್ದಾರೆ. ಅದಲ್ಲದೆ ಅಶ್ವಿನಿ ಪುನೀತ್‌ರಾಜಕುಮಾರ್, ನಟ ಜಗ್ಗೇಶ್, ನಟಿ ಮೇಘನಾ ರಾಜ್,  ರಿಯಲ್ ಸ್ಟಾರ್ ಉಪೇಂದ್ರ, ನಟ ನೆನಪಿರಲಿ ಪ್ರೇಮ್ ಕುಟುಂಬ, ನಟಿ ಸಂಜನಾ ಆನಂದ್, ನಟಿ ಮಯೂರಿ, ರಾಘವೇಂದ್ರ ರಾಜಕುಮಾರ್, ನಟಿ ಅಮೂಲ್ಯ ಅವರ ಮನೆಗೆ ದಂಪತಿ ಸಮೇತ ತೆರಳಿ ಆಹ್ವಾನ ಪತ್ರಿಕೆಯನ್ನು ನೀಡಿದ್ದಾರೆ.

ಇನ್ನೂ 2014 ಡಿಸೆಂಬರ್ 18ರಂದು ಸಪ್ನಾ ಅವರನ್ನು ಮದುವೆಯಾದ ಅಜಯ್ ದಂಪತಿಗೆ ಚೆರಿಷ್ಮಾ ಎಂಬ ಮಗಳಿದ್ದಾಳೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ರಾಮಾಯಣ ಟೀಂ ಸೇರಿಕೊಂಡ ಯಶ್: ಬಾಲಿವುಡ್ ನಲ್ಲಿ ಯಶ್ ಡಬಲ್ ಧಮಾಕ