Select Your Language

Notifications

webdunia
webdunia
webdunia
webdunia

Vijay Prakash: ಲವ ಲವಿಕೆಯಿಂದಿದ್ದ ಗಾಯಕ ವಿಜಯ್ ಪ್ರಕಾಶ್ ಗೆ ಇದ್ದಕ್ಕಿದ್ದಂತೆ ಏನಾಯ್ತು, ಫೋಟೋ ನೋಡಿ

Vijay Prakash

Krishnaveni K

ಬೆಂಗಳೂರು , ಗುರುವಾರ, 3 ಏಪ್ರಿಲ್ 2025 (12:58 IST)
ಬೆಂಗಳೂರು: ಕನ್ನಡದ ಹೆಮ್ಮೆಯ ಬಹುಭಾಷಾ ಗಾಯಕ ವಿಜಯ್ ಪ್ರಕಾಶ್ ಎಲ್ಲೇ ಹೋದ್ರೂ ಚಿನಕುರುಳಿಯಂತಿರುತ್ತಾರೆ. ಆದರೆ ಅವರಿಗೆ ಇದ್ದಕ್ಕಿದ್ದಂತೆ ಏನಾಯ್ತು? ಇಲ್ಲಿ ನೋಡಿ.

ಕನ್ನಡದ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಹಲವು ಸೂಪರ್ ಹಿಟ್ ಹಾಡುಗಳನ್ನು ಕೊಟ್ಟವರು. ಕನ್ನಡದ ಹೆಮ್ಮೆಯ ಗಾಯಕನಿಗೆ ಈಗ ಹುಷಾರಿಲ್ಲ. ಅಂತಹದ್ದೇನಾಗಿದೆ ಎಂಬ ಆತಂಕಕ್ಕೆ ಅವರೇ ಉತ್ತರ ಕೊಟ್ಟಿದ್ದಾರೆ.

ವಿಜಯ್ ಪ್ರಕಾಶ್ ನಿನ್ನೆ ಚಿನ್ನಸ್ವಾಮಿ ಮೈದಾನದಲ್ಲಿ ಆರ್ ಸಿಬಿ ಓಪನಿಂಗ್ ಮ್ಯಾಚ್ ಗೆ ಮುನ್ನ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದು, ಸದ್ಯಕ್ಕೆ ಪ್ಲಾಸ್ಟರ್ ಹಾಕಲಾಗಿದೆ. ಇದೀಗ ಅವರಿಗೆ ಎದ್ದು ಓಡಾಡಲು ಕಷ್ಟಪಡುವ ಸ್ಥಿತಿಯಾಗಿದೆ. ಇದನ್ನು ಅವರೇ ಫೋಟೋ ಸಮೇತ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.


ನಿನ್ನೆ ಕಾರ್ಯಕ್ರಮ ಮುಗಿದ ಬಳಿಕ ಕಾಲು ಉಳುಕಿದೆ. ಇದರಿಂದಾಗಿ ನನ್ನ ಪರಿಸ್ಥಿತಿ ಈಗ ಹೀಗಾಗಿದೆ ಎಂದು ಫೋಟೋ ಪ್ರಕಟಿಸಿದ್ದಾರೆ. ಅವರ ಸ್ಥಿತಿ ನೋಡಿ ಅಭಿಮಾನಿಗಳು ಯಾರ ದೃಷ್ಟಿಯಾಯ್ತೋ, ಬೇಗ ಹುಷಾರಾಗಿ ಎಂದು ಹಾರೈಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

Kiccha Sudeep: ಅಬ್ಬಬ್ಬಾ.. ಈ ವಯಸ್ಸಲ್ಲೂ ಏನು ಬಾಡಿ, ಕಿಚ್ಚ ಸುದೀಪ್ ಹೊಸ ಲುಕ್ ನೋಡಿ