Webdunia - Bharat's app for daily news and videos

Install App

ಡ್ರಗ್ ಮಾಫಿಯಾ: ಮಾನ, ವೃತ್ತಿ ಜೀವನ ಹರಾಜಾಗುವ ಭೀತಿಯಲ್ಲಿ ಕಲಾವಿದರು

Webdunia
ಗುರುವಾರ, 24 ಸೆಪ್ಟಂಬರ್ 2020 (09:57 IST)
ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣದಲ್ಲಿ ಹಲವು ನಟ-ನಟಿಯರನ್ನು ಸಿಸಿಬಿ, ಐಎಸ್ ಡಿ, ಎನ್ ಸಿಬಿ ತನಿಖೆ ನಡೆಸುತ್ತಿದೆ. ಆದರೆ ಒಬ್ಬೊಬ್ಬರೇ ನಟ-ನಟಿಯರ ಹೆಸರು ಬಂದೊಡನೆ ಆ ಕಲಾವಿದರ ಎದೆಯಲ್ಲಿ ತಪ್ಪು ಮಾಡದೆಯೂ ಭಯ ಆವರಿಸುವ ಪರಿಸ್ಥಿತಿ ಎದುರಾಗಿದೆ.


ವಿಚಾರಣೆಗೆ ಪೊಲೀಸರು ಕರೆದ ಸುದ್ದಿ ತಿಳಿದ ತಕ್ಷಣ ಮಾಧ‍್ಯಮಗಳಲ್ಲಿ ಅವರ ಬಗ್ಗೆ ದೊಡ್ಡದಾಗಿ ಸುದ್ದಿ ಬಿತ್ತರವಾಗುತ್ತಿದೆ. ಇದರಿಂದಾಗಿ ತಪ್ಪು ಮಾಡಿದ್ದಾರೋ, ಬಿಟ್ಟಿದ್ದಾರೋ ಅವರನ್ನು ಎಲ್ಲರೂ ಅನುಮಾನದ ದೃಷ್ಟಿಯಲ್ಲಿ ನೋಡುವಂತಾಗಿದೆ. ಇದು ತಮ್ಮ ವೃತ್ತಿ ಜೀವನಕ್ಕೆ, ಭವಿಷ್ಯಕ್ಕೆ ಕುತ್ತು ತರುತ್ತದೆ ಎಂಬ ಭಯ, ಆತಂಕದಲ್ಲಿ ಕಲಾವಿದರಿದ್ದಾರೆ. ಈಗಾಗಲೇ ಸಾಮಾನ್ಯ ವಿಚಾರಣೆಗೊಳಗಾದ ಎಲ್ಲಾ ಕಲಾವಿದರೂ ಮಾಧ್ಯಮಗಳ ಮುಂದೆ ಇದೇ ಮನವಿಯನ್ನು ಮಾಡುತ್ತಿದ್ದಾರೆ. ನಾವು ತಪ್ಪು ಮಾಡಿಲ್ಲ. ವಿಚಾರಣೆಗೆ ಕರೆದಿದ್ದಾರಷ್ಟೇ. ತಪ್ಪು ಮಾಡದೇ ನಮ್ಮನ್ನು ಅಪರಾಧಿಗಳಂತೆ ಬಿಂಬಿಸಿ ವೃತ್ತಿಗೆ ಕಂಟಕ ತರಬೇಡಿ ಎಂದು ಹಲವರು ಮನವಿ ಮಾಡುತ್ತಿದ್ದಾರೆ. ಎಷ್ಟೇ ಒಳ್ಳೆಯ ಕೆಲಸ ಮಾಡಿದ್ದರೂ, ಡ್ರಗ್ ಮಾಫಿಯಾದಲ್ಲೂ ಭಾಗಿಯಾಗದೇ ಇದ್ದರೂ ತಮ್ಮ ಮೇಲೆ ಅನುಮಾನದ ದೃಷ್ಟಿ ಬೀಳುವುದರಿಂದ ತಮ್ಮ ಭವಿಷ್ಯಕ್ಕೇ ಕುತ್ತಾಗುತ್ತದೆ ಎಂಬುದು ಇವರೆಲ್ಲರ ಭಯ.

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments