ಬೆಂಗಳೂರು: ಬಹುಭಾಷಾ ನಟ ಅರ್ಜುನ್ ಸರ್ಜಾ ಮಗಳು ಐಶ್ವರ್ಯಾ ಅವರು ತಮಿಳಿನ ನಟ ರಾಮಯ್ಯ ಅವರ ಪುತ್ರ ಉಮಾಪತಿ ರಾಮಯ್ಯ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
 
 			
 
 			
					
			        							
								
																	ಜೂನ್ 10ರಂದು ಈ ಜೋಡಿ ವಿವಾಹವಾಗಿದ್ದು, ನಟಿ ಮದುವೆಯ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ.  ಐಶ್ವರ್ಯಾ ಅರ್ಜುನ್ ಅವರು ಸುಂದರವಾದ ಕೆಂಪು ಬಣ್ಣದ ಸೀರೆ ಉಟ್ಟಿದ್ದರೆ, ಉಮಾಪತಿ ರಾಮಯ್ಯ ಅವರು ಪಂಚೆ ಶರ್ಟ್ ಶಲ್ಯ ಧರಿಸಿದ್ದರು.
									
										
								
																	 ಚೆನ್ನೈನ ಹನುಮಾನ್ ದೇವಸ್ಥಾನದಲ್ಲಿ ವಿವಾಹ ನಡೆದಿದೆ.  ಐಶ್ವರ್ಯಾ ಅರ್ಜುನ್ ಸಣ್ಣ ಕೆಂಪು ಬಿಂದಿ ಧರಿಸಿ ಅದರೊಂದಿಗೆ ಆಕರ್ಷಕವಾದ ಆಭರಣಗಳನ್ನು ಧರಿಸಿದ್ದರು.  
									
											
							                     
							
							
			        							
								
																	ಅರ್ಜುನ್ ಸರ್ಜಾ ಮನೆಯಲ್ಲಿ ಮದುವೆಗೆ ಸಂಬಂಧಿಸಿದ ಹಲ್ದಿ ಮತ್ತು ಮೆಹಂದಿ ಸಮಾರಂಭಗಳು ಅದ್ಧೂರಿಯಾಗಿ ನಡೆದಿದ್ದವು. ಶಾಸ್ತ್ರದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.  
									
			                     
							
							
			        							
								
																	ಅರ್ಜುನ್ ಮಗಳು ಐಶ್ವರ್ಯಾ ನಾಯಕಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟರು. ಆದ್ರೆ ಆಕೆಗೆ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಸಿಗಲಿಲ್ಲ. ಕನ್ನಡದ ಪ್ರೇಮಬರಹ ಸಿನಿಮಾದಲ್ಲಿ ನಟಿಸಿದ್ದಾರೆ.  ಇದುವರೆಗೆ ಐಶ್ವರ್ಯಾ ಅಭಿನಯದ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಯಶಸ್ಸು ಕಂಡಿಲ್ಲ.  
ಐಶ್ವರ್ಯಾ ಮತ್ತು ಉಮಾಪತಿ ಟಿವಿ ಕಾರ್ಯಕ್ರಮವೊಂದರಲ್ಲಿ ಪರಿಚಯವಾದ್ರು. ಇಬ್ಬರ ಸ್ನೇಹ ಪ್ರೀತಿಗೆ ತಿರುಗಿತು. ಈ ವಿಚಾರವನ್ನು ಹಿರಿಯರ ಗಮನಕ್ಕೆ ತಂದಾಗ ಇಬ್ಬರ ಮನೆಯವರು ಮದುವೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಕಳೆದ ವರ್ಷ ಅಕ್ಟೋಬರ್ನಲ್ಲಿ ಅವರ ನಿಶ್ಚಿತಾರ್ಥ ಸಮಾರಂಭ ನಡೆದಿತ್ತು.