Select Your Language

Notifications

webdunia
webdunia
webdunia
webdunia

ಮಗಳ ಮದುವೆಗೆ ತಯಾರಿ ಶುರು ಮಾಡಿಕೊಂಡ ಅರ್ಜುನ್ ಸರ್ಜಾ

Aishwarya Sarja-Umapathy

Krishnaveni K

ಬೆಂಗಳೂರು , ಗುರುವಾರ, 30 ಮೇ 2024 (10:11 IST)
ಬೆಂಗಳೂರು: ಬಹುಭಾಷಾ ನಟ ಅರ್ಜುನ್ ಸರ್ಜಾ ಪುತ್ರಿ, ನಟಿ ಐಶ್ವರ್ಯಾ ಸರ್ಜಾ ಮದುವೆಗೆ ಕೆಲವೇ ದಿನಗಳು ಬಾಕಿಯಿವೆ. ಇದೀಗ ಅರ್ಜುನ್ ಸರ್ಜಾ ತಮ್ಮ ಮಗಳ ಮದುವೆ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ.

ಐಶ್ವರ್ಯಾ ಸರ್ಜಾ ಮತ್ತು ತಮಿಳು ನಟ ಉಮಾಪತಿ ಮದುವೆ ಜೂನ್ 10 ರಂದು ನಡೆಯಲಿದೆ. ಈ ಮದುವೆ ಕಾರ್ಯಕ್ರಮ ಚೆನ್ನೈನಲ್ಲಿ ನಡೆಯಲಿದೆ. ಅರ್ಜುನ್ ಸರ್ಜಾ ಕುಟುಂಬ ಮತ್ತು ಉಮಾಪತಿ ಕುಟುಂಬ ಚೆನ್ನೈನಲ್ಲೇ ನೆಲೆಸಿರುವ ಕಾರಣ ಅಲ್ಲಿಯೇ ವಿವಾಹ ಸಮಾರಂಭ ನಡೆಯುತ್ತಿದೆ. ಈ ಮೊದಲು ನಿಶ್ಚಿತಾರ್ಥವೂ ಚೆನ್ನೈನಲ್ಲೇ ನಡೆದಿತ್ತು.

ಇದೀಗ ಜೂನ್ 10 ರಂದು ಚೆನ್ನೈನಲ್ಲಿ ಐಶ್ವರ್ಯಾ-ಉಮಾಪತಿ ಶಾಸ್ತ್ರೋಸ್ತ್ರಕವಾಗಿ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದಕ್ಕಾಗಿ ಈಗಾಗಲೇ ಅರ್ಜುನ್ ಸರ್ಜಾ ಕನ್ನಡ ಮತ್ತು ತಮಿಳು ಸಿನಿಮಾ ಸ್ನೇಹಿತರ ಮನೆಗೆ ತೆರಳಿ ಖುದ್ದಾಗಿ ಆಹ್ವಾನ ಪತ್ರಿಕೆ ಹಂಚುತ್ತಿದ್ದಾರೆ.

ಇತ್ತೀಚೆಗೆ ನಟ ಜಗ್ಗೇಶ್ ಮನೆಗೆ ತೆರಳಿ ಅರ್ಜುನ್ ಸರ್ಜಾ ದಂಪತಿ ಮದುವೆಗೆ ಆಹ್ವಾನ ನೀಡಿದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಅರ್ಜುನ್ ಸರ್ಜಾ ಮೂಲತಃ ಕನ್ನಡದವರಾಗಿರುವುದರಿಂದ ಕನ್ನಡದ ಅನೇಕ ಸಿನಿಮಾ ಕಲಾವಿದರೂ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ಯಾಲೆಸ್ಟೀನ್‌ ಪರ ಪೋಸ್ಟ್ ಹಂಚಿ ಡಿಲೀಟ್ ಮಾಡಿದ ಬಾಲಿವುಡ್‌ ನಟಿ ಮಾಧುರಿ