ಹೈದರಾಬಾದ್ : ದಕ್ಷಿಣ ಭಾರತದ ಕಲಾವಿದರು ಇದೀಗ ವೆಬ್ ಸಿರೀಸ್ ನಲ್ಲಿ ನಟಿಸಲು ಶುರುಮಾಡಿದ್ದು, ಇದೀಗ ನಟಿ ಅನುಷ್ಕಾ ಶೆಟ್ಟಿ ಕೂಡ ವೆಬ್ ಸಿರೀಸ್ ನಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
									
										
								
																	
ಹೌದು. ಕೊರೊನಾ ಭೀತಿ ಹಿನ್ನಲೆಯಲ್ಲಿ ಸಿನಿಮಾ ಶೂಟಿಂಗ್ ಗಳು ಸ್ಥಗಿತಗೊಂಡ ಹಿನ್ನಲೆಯಲ್ಲಿ  ಕಲಾವಿದರು ವೆಬ್ ಸಿರೀಸ್ ಕಡೆಗೆ ಒಲಿವು ತೋರಿಸುತ್ತಿದ್ದಾರೆ. ಈಗಾಗಲೇ ನಟಿ ಕಾಜಲ್, ಸಮಂತಾ, ಶ್ರುತಿ ಹಾಸನ್ ವೆಬ್ ಸಿರೀಸ್ ನಲ್ಲಿ ನಟಿಸಲಿದ್ದಾರೆ.
									
			
			 
 			
 
 			
			                     
							
							
			        							
								
																	ಇದೀಗ ವೆಬ್ ಸಿರೀಸ್ ವೊಂದು ದಕ್ಷಿಣದ ಭಾರತದ ಎಲ್ಲಾ ಭಾಷೆಗಳಲ್ಲಿ ರಿಲೀಸ್ ಆಗಲಿದ್ದು, ಇದರಲ್ಲಿ  ನಟಿ ಅನುಷ್ಕಾ ನಟಿಸಬೇಕು ಎಂಬುದು ಆಯೋಜಕರ  ಇಚ್ಛೆಯಾಗಿತ್ತು. ಆದರೆ ನಟಿ  ಅನುಷ್ಕಾ ಈ ಆಫರ್ ನ್ನು ತಿರಸ್ಕರಿಸಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಆದರೆ ಇದಕ್ಕೆ  ಕಾರಣವೇನೆಂಬುದು ತಿಳಿದುಬಂದಿಲ್ಲ.