Select Your Language

Notifications

webdunia
webdunia
webdunia
webdunia

ವೆಬ್ ಸಿರೀಸ್ ಗೆ ಎಂಟ್ರಿ ಕೊಡಲಿದ್ದಾರಂತೆ ನಟಿ ಸಾಯಿ ಪಲ್ಲವಿ

ವೆಬ್ ಸಿರೀಸ್ ಗೆ ಎಂಟ್ರಿ ಕೊಡಲಿದ್ದಾರಂತೆ ನಟಿ ಸಾಯಿ ಪಲ್ಲವಿ
ಚೆನ್ನೈ , ಬುಧವಾರ, 29 ಜುಲೈ 2020 (13:09 IST)
ಚೆನ್ನೈ : ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ ಇದೀಗ ವೆಬ್ ಸಿರೀಸ್ ಗೆ ಎಂಟ್ರಿ ಕೊಟ್ಟಿದ್ದಾರೆ ಎಂಬ ಸುದ್ಧಿ ಹರಿದಾಡುತ್ತಿದೆ.

ಇತ್ತೀಚಿನ ದಿನಗಳಲ್ಲಿ ಲಾಕ್ ಡೌನ್ ನಿಂದಾಗಿ ಸಿನಿಮಾ ನಟ ನಟಿಯರು ವೆಬ್ ಸಿರೀಸ್ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಈಗಾಗಲೇ ನಟಿ ಸಮಂತಾ ಅಕ್ಕಿನೇನಿ, ಕಾಜಲ್ ವೆಬ್ ಸಿರೀಸ್ ಗೆ ಎಂಟ್ರಿ ಕೊಟ್ಟಿದ್ದಾರೆ. ಇದೀಗ ನಟಿ ಸಾಯಿ ಪಲ್ಲವಿ ಕೂಡ ವೆಬ್ ಸಿರೀಸ್ ನಲ್ಲಿ ಮಿಂಚಲು ರೆಡಿಯಾಗಿದ್ದಾರೆ ಎನ್ನಲಾಗಿದೆ.

ಈ ವೆಬ್ ಸಿರೀಸ್ ನಲ್ಲಿ  ಖ್ಯಾತ ನಿರ್ದೇಶಕ ವೆಟ್ರಿಮಾರನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನೆಟ್ ಪ್ಲಿಕ್ಸ್ ಇಂಡಿಯಾ ಬಂಡವಾಳ ಹೂಡುತ್ತಿದೆ. ಸದ್ಯದಲ್ಲೇ ಚಿತ್ರೀಕರಣ ಕೂಡ ಶುರುವಾಗಲಿದೆ ಎನ್ನಲಾಗಿದೆ. ಇನ್ನೊಂದು ವಿಶೇಷವೆಂದರೆ ಇದರಲ್ಲಿ ನಟ ಪ್ರಕಾಶ್ ರೈ ನಟಿ ಸಾಯಿ ಪಲ್ಲವಿಯ ತಂದೆಯ ಪಾತ್ರದಲ್ಲಿ ನಟಿಸಲಿದ್ದಾರಂತೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ರಿಯಾಲಿಟಿ ಶೂ ವಿರುದ್ಧ ಗಂಭೀರ ಆರೋಪ ಮಾಡಿದ ನಟಿ ಒವಿಯಾ