Select Your Language

Notifications

webdunia
webdunia
webdunia
Thursday, 24 April 2025
webdunia

ಕೊರೊನಾ ಸೋಂಕಿಗೆ ಒಳಗಾದ ನಿರ್ದೇಶಕ ರಾಜಮೌಳಿ

ಹೈದರಾಬಾದ್
ಹೈದರಾಬಾದ್ , ಗುರುವಾರ, 30 ಜುಲೈ 2020 (12:03 IST)
ಹೈದರಾಬಾದ್ : ಖ್ಯಾತ ನಿರ್ದೇಶಕ ರಾಜಮೌಳಿ ಹಾಗೂ ಅವರ  ಕುಟುಂಬದವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ನಿರ್ದೇಶಕ ರಾಜಮೌಳಿಗೆ ಕೆಲವು ದಿನಗಳಿಂದ ಸ್ವಲ್ಪ ಜ್ವರವಿದ್ದ ಕಾರಣ ಕೊರನಾ ಪರೀಕ್ಷೆಗೆ ಒಳಗಾಗಿದ್ದರು. ಹಾಗೇ ಅವರ ಕುಟುಂಬದವರು ಕೂಡ ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಆದರೆ ಎಲ್ಲರಿಗೂ ಕೊರೊನಾ ಇರುವುದು ದೃಢಪಟ್ಟಿದೆಯಂತೆ. ಈ ಹಿನ್ನಲೆಯಲ್ಲಿ ಎಲ್ಲರೂ ವೈದ್ಯರ ಸಲಹೆ ಮೇರೆಗೆ ಹೋಂ ಕ್ವಾರಂಟೈನ್ ಆಗಿರುವುದಾಗಿ ಅವರು ಟ್ವೀಟರ್  ನಲ್ಲಿ ಮಾಹಿತಿ ನೀಡಿದ್ದಾರೆ.

ಅಲ್ಲದೇ ‘ನಮಗೆ ರೋಗದ ಲಕ್ಷಣಗಳಿರಲಿಲ್ಲ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಕೊಳ್ಳುವ ಪ್ರಯತ್ನದಲ್ಲಿದ್ದೇವೆ. ಆದಷ್ಟು ಬೇಗ ಗುಣಮುಖರಾಗಿ ಪ್ಲಾಸ್ಮಾ ದಾನ ಮಾಡಲು ಕಾತುರರಾಗಿ ಕಾಯುತ್ತಿದ್ದೇವೆ’ ಎಂಬುದಾಗಿ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತಾವು ತೆಗೆದುಕೊಂಡ ಆಯುರ್ವೇದದ ಕೊರೊನಾ ಔಷಧ ದ ಬಗ್ಗೆ ಮಾಹಿತಿ ನೀಡಿದ ನಟ ವಿಶಾಲ್