Publish Date: Sat, 13 Jul 2019 (09:57 IST)
Updated Date: Sat, 13 Jul 2019 (09:59 IST)
ಲಂಡನ್: ಭುಜದ ಶಸ್ತ್ರಚಿಕಿತ್ಸೆಗಾಗಿ ಲಂಡನ್ ಗೆ ತೆರಳಿರುವ ನಟ ಶಿವರಾಜ್ ಕುಮಾರ್ ಅಲ್ಲಿ ಕನ್ನಡಿಗ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಭೇಟಿಯಾಗಿದ್ದಾರೆ.
ಶಿವರಾಜ್ ಕುಮಾರ್ ಬರ್ತ್ ಡೇ ಪ್ರಯುಕ್ತ ಪುನೀತ್ ರಾಜ್ ಕುಮಾರ್ ಮತ್ತು ಕುಟುಂಬ ವರ್ಗ ಲಂಡನ್ ಗೆ ತೆರಳಿ ಕೇಕ್ ಕಟ್ ಮಾಡಿ ಬರ್ತ್ ಡೇ ಆಚರಿಸಿಕೊಂಡಿದ್ದರು. ಇದರ ಬೆನ್ನಲ್ಲೇ ಶಿವಣ್ಣ ಬರ್ತ್ ಡೇಗೆ ಅನಿಲ್ ಕುಂಬ್ಳೆ ದಂಪತಿಯೂ ಆಗಮಿಸಿ ಶುಭ ಕೋರಿದ್ದಾರೆ.
ವಿಶ್ವಕಪ್ ಕೂಟಕ್ಕಾಗಿ ಲಂಡನ್ ನಲ್ಲಿರುವ ಅನಿಲ್ ಕುಂಬ್ಳೆ ತಮ್ಮ ಆತ್ಮೀಯರೂ ಆಗಿರುವ ಶಿವರಾಜ್ ಕುಮಾರ್ ರನ್ನು ಭೇಟಿಯಾಗಿ ತಾವೇ ಕೇಕ್ ತಿನಿಸಿ ಶುಭಾಷಯ ಕೋರಿದ್ದಾರೆ. ಈ ಫೋಟೋಗಳನ್ನು ಸ್ವತಃ ಶಿವರಾಜ್ ಕುಮಾರ್ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಪ್ರಕಟಿಸಿದ್ದಾರೆ.