Select Your Language

Notifications

webdunia
webdunia
webdunia
webdunia

ಶಿವಣ್ಣ ಬರ್ತ್ ಡೇಗೆ ಲಂಡನ್ ಗೆ ತೆರಳಿದ ಪುನೀತ್ ಮತ್ತು ಕುಟುಂಬ

ಶಿವಣ್ಣ ಬರ್ತ್ ಡೇಗೆ ಲಂಡನ್ ಗೆ ತೆರಳಿದ ಪುನೀತ್ ಮತ್ತು ಕುಟುಂಬ
ಬೆಂಗಳೂರು , ಶುಕ್ರವಾರ, 12 ಜುಲೈ 2019 (10:19 IST)
ಬೆಂಗಳೂರು: ಅಣ್ಣ, ಎನರ್ಜಟಿಕ್ ಹೀರೋ ಶಿವರಾಜ್ ಕುಮಾರ್ ಗೆ ಇಂದು ಜನ್ಮದಿನದ ಸಂಭ್ರಮ. ಶಿವಣ್ಣ ಈ ಬಾರಿ ಬರ್ತ್ ಡೇ ಸಂದರ್ಭದಲ್ಲಿ ಲಂಡನ್ ಗೆ ಚಿಕಿತ್ಸೆಗಾಗಿ ತೆರಳಿದ್ದಾರೆ.

 

ಆದರೂ ಅವರಿಗೆ ವಿಶ್ ಮಾಡುವವರಿಗೇನೂ ಕೊರತೆಯಾಗಿಲ್ಲ. ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳು, ಸ್ಯಾಂಡಲ್ ವುಡ್ ಸ್ನೇಹಿತರು ಶಿವರಾಜ್ ಕುಮಾರ್ ಗೆ ಶುಭ ಕೋರುತ್ತಿದ್ದಾರೆ.

ಈ ನಡುವೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್  ಹಾಗೂ ಕುಟುಂಬ ಸದಸ್ಯರು ಲಂಡನ್ ಗೇ ತೆರಳಿ ತಮ್ಮ ಮೆಚ್ಚಿನ ಅಣ್ಣ ಶಿವಣ್ಣನ ಬರ್ತ್ ಡೇ ಆಚರಿಸಿಕೊಂಡಿದ್ದಾರೆ.  ಸಾಮಾಜಿಕ ಜಾಲತಾಣದಲ್ಲಿ ಅಣ್ಣನ ಜತೆಗಿನ ಸೆಲ್ಫೀ ಜತೆಗೆ ಹ್ಯಾಪಿ ಬರ್ತ್ ಡೇ ಶಿವಣ್ಣ ಎಂದು ಬರೆದಿರುವ ಸ್ಪೆಷಲ್ ಕೇಕ್ ಫೋಟೋವನ್ನು ಪ್ರಕಟಿಸಿ ಶುಭ ಹಾರೈಸಿದ್ದಾರೆ. ಶಸ್ತ್ರಚಿಕಿತ್ಸೆ ಮುಗಿಸಿಕೊಂಡಿರುವ ಶಿವಣ್ಣ ಈಗ ವಿಶ್ರಾಂತಿಯಲ್ಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವೀಕೆಂಡ್ ವಿತ್ ರಮೇಶ್ ಗೆ ಕೊನೆಗೂ ತೆರೆ