Publish Date: Wed, 06 Jul 2022 (10:30 IST)
Updated Date: Wed, 06 Jul 2022 (10:33 IST)
ಮುಂಬೈ: ಕಾಫಿ ವಿತ್ ಕರಣ್ ಶೋನಲ್ಲಿ ಅತಿಥಿಯಾಗಿ ಪಾಲ್ಗೊಂಡಿರುವ ರಣಬೀರ್ ಕಪೂರ್ ಪತ್ನಿ, ನಟಿ ಅಲಿಯಾ ಭಟ್ ಫಸ್ಟ್ ನೈಟ್ ಕುರಿತಾಗಿ ನೀಡಿದ ಹೇಳಿಕೆ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದೆ.
ರಣವೀರ್ ಸಿಂಗ್ ಜೊತೆ ಶೋನಲ್ಲಿ ಭಾಗಿಯಾದ ಅಲಿಯಾ ಭಟ್ ಗೆ ಕರಣ್ ಜೋಹರ್ ಮದುವೆ ಬಗ್ಗೆ ನಿಮ್ಮ ಕಲ್ಪನೆಗಳು ಸುಳ್ಳಾಗಿವೆಯೇ ಎಂದು ಪ್ರಶ್ನೆ ಕೇಳಿದ್ದಾರೆ.
ಇದಕ್ಕೆ ಉತ್ತರಿಸಿದ ಅಲಿಯಾ ಫಸ್ಟ್ ನೈಟ್ ಎಂಬುದು ಏನೂ ಇರಲ್ಲ. ಆ ದಿನ ನಾವು ಸಾಕಷ್ಟು ಸುಸ್ತಾಗಿರುತ್ತೇವೆ. ಹಾಗಾಗಿ ಬೇರೇನೂ ನಡೆಯಲ್ಲ. ಸುಮ್ಮನೆ ಮಲಗುತ್ತೇವಷ್ಟೇ ಎಂದು ಅಲಿಯಾ ತಮಾಷೆಯಾಗಿ ಹೇಳಿದ್ದಾರೆ. ಅವರ ಉತ್ತರ ಕೇಳಿ ಕರಣ್ ಹಾಗೂ ರಣವೀರ್ ಇಬ್ಬರೂ ಬಿದ್ದೂ ಬಿದ್ದೂ ನಕ್ಕಿದ್ದಾರೆ. ಇದೇ ಏಪ್ರಿಲ್ ನಲ್ಲಿ ಮದುವೆಯಾಗಿದ್ದ ಅಲಿಯಾ ಮೊನ್ನೆಯಷ್ಟೇ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಘೋಷಿಸಿದ್ದರು.