Select Your Language

Notifications

webdunia
webdunia
webdunia
webdunia

ಕರಣ್ ಜೋಹರ್ ಶೋಗೆ ಬರಲು ನಿರಾಕರಿಸಿದ ಜೂ.ಎನ್ ಟಿಆರ್, ರಾಮ್ ಚರಣ್

ಕರಣ್ ಜೋಹರ್ ಶೋಗೆ ಬರಲು ನಿರಾಕರಿಸಿದ ಜೂ.ಎನ್ ಟಿಆರ್, ರಾಮ್ ಚರಣ್
ಹೈದರಾಬಾದ್ , ಶನಿವಾರ, 2 ಜುಲೈ 2022 (08:50 IST)
ಹೈದರಾಬಾದ್: ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಶೋ ಜನಪ್ರಿಯ ಶೋಗಳಲ್ಲಿ ಒಂದಾಗಿದೆ. ಈ ಕಾರ್ಯಕ್ರಮಕ್ಕೆ ಅನೇಕ ಘಟಾನುಘಟಿಗಳು ಬಂದು ಹಲವು ಕಾಂಟ್ರವರ್ಸಿಗಳು ಆಗಿದ್ದುಂಟು.

ಈಗ ಈ ಕಾರ್ಯಕ್ರಮದ ಹೊಸ ಸೀಸನ್ ಒಟಿಟಿ ಮೂಲಕ ಅಂದರೆ ಡಿಸ್ನಿ ಹಾಟ್ ಸ್ಟಾರ್ ಮೂಲಕ ಜುಲೈ 7 ರಿಂದ ಪ್ರಸಾರವಾಗಲಿದೆ. ಒಟಿಟಿಯಲ್ಲಿ ಈ ಕಾರ್ಯಕ್ರಮ ಪ್ರಸಾರವಾಗುತ್ತಿರುವುದು ಇದೇ ಮೊದಲು.

ಈ ಕಾರ್ಯಕ್ರಮಕ್ಕೆ ಈ ಬಾರಿ ಆರ್ ಆರ್ ಆರ್ ‍ಸ್ಟಾರ್ ಗಳಾದ ಜೂ.ಎನ್ ಟಿಆರ್ ಮತ್ತು ರಾಮ್ ಚರಣ್ ಜೊತೆಯಾಗಿ ಬರಬಹುದು ಎನ್ನಲಾಗಿತ್ತು. ಆದರೆ ಇಬ್ಬರೂ ಆಫರ್ ತಿರಸ್ಕರಿಸಿದ್ದಾರೆಂದು ಕೇಳಿಬಂದಿದೆ. ಇದಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಭಾಸ್ ಜೊತೆಗೆ ಈ ಸಿನಿಮಾದಲ್ಲಿ ತೆರೆ ಹಂಚಿಕೊಳ್ಳುತ್ತಾರಾ ರಾಕಿ ಭಾಯಿ ಯಶ್?