ಮುಂಬೈ: ಇತ್ತೀಚೆಗಷ್ಟೇ ಮದುವೆಯಾಗಿದ್ದ ರಣಬೀರ್ ಕಪೂರ್-ಅಲಿಯಾ ಭಟ್ ದಂಪತಿ ನಿನ್ನೆಯಷ್ಟೇ ತಾವಿಬ್ಬರೂ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸಿಹಿ ಸುದ್ದಿ ಕೊಟ್ಟಿದ್ದರು.
ಈ ಸಿಹಿ ಸುದ್ದಿ ಹಂಚಿಕೊಂಡ ಬೆನ್ನಲ್ಲೇ ದಂಪತಿಗೆ ಶುಭಾಷಯಗಳ ಮಹಾಪೂರವೇ ಹರಿದುಬರುತ್ತಿದೆ. ಈ ನಡುವೆ ಕಾಂಡೋಮ್ ಕಂಪನಿ ಡ್ಯುರೆಕ್ಸ್ ವಿಶಿಷ್ಟವಾಗಿ ಶುಭಾಷಯ ಕೋರಿದೆ.
ಅಲಿಯಾ-ರಣಬೀರ್ ಮದುವೆಯಾದಾಗ ಡ್ಯುರೆಕ್ಸ್ ಕಂಪನಿ ನಿಮ್ಮ ಖುಷಿಯ ಕ್ಷಣಗಳಲ್ಲಿ ನಾವಿರಲೇ ಬೇಕು ಎಂದು ಟ್ವೀಟ್ ಮಾಡಿ ಶುಭಾಷಯ ಕೋರಿತ್ತು. ಇದೀಗ ಅಲಿಯಾ ಗರ್ಭಿಣಿ ಎನ್ನುವ ಸುದ್ದಿ ತಿಳಿಯುತ್ತಿದ್ದಂತೇ ಡ್ಯುರೆಕ್ಸ್ ನಿಮ್ಮ ಖುಷಿಯ ಕ್ಷಣದಲ್ಲಿ ಖಂಡಿತವಾಗಿಯೂ ನಾವಿರಲಿಲ್ಲ ಎಂದು ತಮಾಷೆಯಾಗಿ ಟ್ವೀಟ್ ಮಾಡಿದ್ದು, ವೈರಲ್ ಆಗಿದೆ.