Select Your Language

Notifications

webdunia
webdunia
webdunia
webdunia

ಕನ್ನಡಿಗರ ಆಕ್ರೋಶಕ್ಕೆ ಗುರಿಯಾದ ಶಾರುಖ್ ಖಾನ್

ಮುಂಬೈ , ಶನಿವಾರ, 25 ಜೂನ್ 2022 (16:57 IST)
ಮುಂಬೈ: ಕೆಜಿಎಫ್ ನಂತಹ ಅದ್ಭುತ ಸಿನಿಮಾ ಮಾಡಿ ಕನ್ನಡ ಸಿನಿಮಾ ರಂಗದ ತಾಕತ್ತು ಏನೆಂದು ತೋರಿಸಿದ ಮೇಲೂ ಪರಭಾಷೆಯ ಕೆಲವರು ಈಗಲೂ ಕನ್ನಡ ಸಿನಿಮಾ ವೀಕ್ಷಕರನ್ನು ಕಡೆಗಣಿಸುತ್ತಿದ್ದಾರೆ.

ಇದೀಗ ಅದೇ ತಪ್ಪು ಮಾಡಲು ಹೋಗಿ ಬಾಲಿವುಡ್ ನಟ ಶಾರುಖ್ ಖಾನ್ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಶಾರುಖ್ ಸಿನಿ ಜೀವನಕ್ಕೆ 25 ವರ್ಷ ತುಂಬಿದ ಹಿನ್ನಲೆಯಲ್ಲಿ ‘ಪಠಾಣ್’ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದೆ. ಈ ಸಿನಿಮಾ ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ ಎಂದು ಶಾರುಖ್ ಟ್ವೀಟ್ ಮಾಡಿದ್ದರು.

ಆದರೆ ಕನ್ನಡ ಮತ್ತು ಮಲಯಾಳಂ ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗುತ್ತಿಲ್ಲ. ಈ ಕಾರಣಕ್ಕೆ ಕನ್ನಡಿಗರು ಟ್ವೀಟ್ ಮೂಲಕವೇ ಶಾರುಖ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀವು ಕನ್ನಡ ಮತ್ತು ಮಲಯಾಳಂ ಭಾಷೆಯನ್ನು ಮಾತ್ರ ಯಾಕೆ ನಿರ್ಲ್ಯಕ್ಷಿಸುತ್ತಿದ್ದೀರಿ? ಎಂದು ಕೆಲವರು ಪ್ರಶ್ನಿಸಿದರೆ ನಮ್ಮಲ್ಲೇ ಎಷ್ಟೋ ಒಳ್ಳೆ ಸಿನಿಮಾಗಳು ಬರುತ್ತಿವೆ. ನಿಮ್ಮ ಸಿನಿಮಾ ನಾವು ನೋಡಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಲಾರ್ ಸೆಕೆಂಡ್ ಹಾಫ್ ಗಾಗಿ ತೆಳ್ಳಗಾದ್ರು ಪ್ರಭಾಸ್