Select Your Language

Notifications

webdunia
webdunia
webdunia
webdunia

ಶೂಟಿಂಗ್ ನಲ್ಲಿ ಅಸ್ವಸ್ಥ: ಆಸ್ಪತ್ರೆ ಸೇರಿದ್ದ ದೀಪಿಕಾ ಪಡುಕೋಣೆ

ಶೂಟಿಂಗ್ ನಲ್ಲಿ ಅಸ್ವಸ್ಥ: ಆಸ್ಪತ್ರೆ ಸೇರಿದ್ದ ದೀಪಿಕಾ ಪಡುಕೋಣೆ
ಹೈದರಾಬಾದ್ , ಬುಧವಾರ, 15 ಜೂನ್ 2022 (10:00 IST)
ಹೈದರಾಬಾದ್: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಶೂಟಿಂಗ್ ನಡುವೆ ಅಸ್ವಸ್ಥರಾಗಿದ್ದು ತಕ್ಷಣವೇ ಹೈದರಾಬಾದ್ ನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅಮಿತಾಭ್ ಬಚ್ಚನ್ ಪ್ರಮುಖ ಪಾತ್ರದಲ್ಲಿರುವ ‘ಪ್ರಾಜೆಕ್ಟ್ ಕೆ’ ಸಿನಿಮಾದ ಶೂಟಿಂಗ್ ಗಾಗಿ ಹೈದರಾಬಾದ್ ನಲ್ಲಿದ್ದ ದೀಪಿಕಾಗೆ ಅನಾರೋಗ್ಯ ಕಾಡಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಹೃದಯ ಬಡಿತದಲ್ಲಿ ಏರುಪೇರಾದ ಹಿನ್ನಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಬಳಲಿಕೆಯಿಂದ ಈ ರೀತಿ ಆಗಿದೆ ಎನ್ನಲಾಗಿದೆ. ಇದೀಗ ಸುಧಾರಿಸಿಕೊಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

777 ಚಾರ್ಲಿ ಮೆಚ್ಚಿದ ಬಾಲಿವುಡ್ ನ ಬೋನಿ ಕಪೂರ್, ಮಧುರ್ ಭಂಡಾರ್ಕರ್