ಮುಂಬೈ: ಸೆಲೆಬ್ರಿಟಿಗಳು ಮದುವೆಯಾದ ಮೇಲೆ ಪದೇ ಪದೇ ಪ್ರೆಗ್ನೆನ್ಸಿ ರೂಮರ್ ಹರಡುವುದು ಸಹಜ. ಆದರೆ ಬಾಲಿವುಡ್ ನ ನವಜೋಡಿ ರಣಬೀರ್ ಕಪೂರ್-ಅಲಿಯಾ ಭಟ್ ಇದಕ್ಕೆಲ್ಲಾ ಅವಕಾಶವೇ ಕೊಟ್ಟಿಲ್ಲ.
ಏಪ್ರಿಲ್ ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಬಾಲಿವುಡ್ ಜೋಡಿ ರಣಬೀರ್ ಕಪೂರ್-ಅಲಿಯಾ ಭಟ್ ಈಗ ಗುಡ್ ನ್ಯೂಸ್ ಕೊಟ್ಟಿದ್ದಾರೆ. ನಮ್ಮ ಮಗು ಸದ್ಯದಲ್ಲೇ ಬರಲಿದೆ ಎಂದು ಅಲಿಯಾ ಸ್ಕ್ಯಾನಿಂಗ್ ಸೆಂಟರ್ ನಲ್ಲಿ ಮಲಗಿರುವ ಫೋಟೋ ಸಮೇತ ಪ್ರೆಗ್ನೆನ್ಸಿ ಸುದ್ದಿ ಕೊಟ್ಟಿದ್ದಾರೆ.
ಮದುವೆಯಾದ ಎರಡೇ ತಿಂಗಳಿಗೆ ಈ ಜೋಡಿ ಮೊದಲ ಮಗುವಿನ ಸುದ್ದಿ ಕೊಟ್ಟಿರುವುದು ಅಭಿಮಾನಿಗಳು, ಕುಟುಂಬಸ್ಥರ ಸಂತೋಷ ಇಮ್ಮಡಿಗೊಳಿಸಿದೆ. ರಣಬೀರ್-ಅಲಿಯಾ ದಂಪತಿಗೆ ಈಗ ಬಾಲಿವುಡ್ ಸ್ನೇಹಿತರು, ಅಭಿಮಾನಿಗಳು ಶುಭಾಷಯಗಳ ಸುರಿಮಳೆಗೈಯುತ್ತಿದ್ದಾರೆ.