Select Your Language

Notifications

webdunia
webdunia
webdunia
webdunia

ಸರ್ಜಾ ಫ್ಯಾಮಿಲಿಗೆ ಮತ್ತೊಂದು ಆಘಾತ!

ಸರ್ಜಾ ಫ್ಯಾಮಿಲಿಗೆ ಮತ್ತೊಂದು ಆಘಾತ!
ಬೆಂಗಳೂರು , ಮಂಗಳವಾರ, 21 ಜುಲೈ 2020 (09:26 IST)
ಬೆಂಗಳೂರು: ಚಿರಂಜೀವಿ ಸರ್ಜಾ ಅಕಾಲಿಕ ಮರಣದ ನಂತರ ಸರ್ಜಾ ಕುಟುಂಬಕ್ಕೆ ಧ್ರುವ ಸರ್ಜಾ ಮತ್ತು ಪತ್ನಿ ಪ್ರೇರಣಾ ಕೊರೋನಾಕ್ಕೆ ತುತ್ತಾಗಿದ್ದು ಆಘಾತ ಉಂಟುಮಾಡಿತ್ತು.


ಅದರ ಬೆನ್ನಲ್ಲೇ ಈಗ ಮತ್ತೊಂದು ಆಘಾತಕಾರಿ ಸುದ್ದಿ ಸಿಕ್ಕಿದೆ. ಅದು ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಸರ್ಜಾ ರೂಪದಲ್ಲಿ! ಐಶ್ವರ್ಯಾ ಕೂಡಾ ತಮಗೆ ಕೊರೋನಾ ಸೋಂಕು ತಗುಲಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ನನಗೆ ಇತ್ತೀಚೆಗಷ್ಟೇ ಕೊರೋನಾ ಇರುವುದು ದೃಢಪಟ್ಟಿದೆ. ಹೀಗಾಗಿ ತಜ್ಞ ವೈದ್ಯರ ಸಲಹೆ ಮೇರೆಗೆ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದೇನೆ. ಇತ್ತೀಚೆಗೆ ಯಾರಾದರೂ ನನ್ನ ಭೇಟಿಯಾಗಿದ್ದಲ್ಲಿ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಐಶ್ವರ್ಯಾ ಮನವಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಾಂತಮ್ಮಜ್ಜಿ ಬಗ್ಗೆ ಪುನೀತ್, ಜಗ್ಗೇಶ್ ಹೇಳಿಕೊಂಡಿದ್ದೇನು ಗೊತ್ತಾ?