Publish Date: Mon, 20 Jul 2020 (15:29 IST)
Updated Date: Mon, 20 Jul 2020 (15:32 IST)
ಬೆಂಗಳೂರು: ನಿನ್ನೆಯಷ್ಟೇ ನಿಧನರಾದ ಹಿರಿಯ ನಟಿ ಶಾಂತಮ್ಮಜ್ಜಿ ಬಗ್ಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮತ್ತು ನವರಸನಾಯಕ ಜಗ್ಗೇಶ್ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
ಡಾ. ರಾಜ್ ಕುಟುಂಬದವರ ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸಿದ್ದ ಶಾಂತಮ್ಮಜ್ಜಿ ನಿಧನಕ್ಕೆ ಕಂಬನಿ ವ್ಯಕ್ತಪಡಿಸಿದ್ದ ಪುನೀತ್ ‘ಅವರು ನಮ್ಮ ಕುಟುಂಬದ ಅತ್ಯಾಪ್ತರಾಗಿದ್ದರು’ ಎಂದು ದುಃಖದಿಂದಲೇ ಸ್ಮರಿಸಿಕೊಂಡಿದ್ದಾರೆ.
ಇನ್ನು ನವರಸನಾಯಕ ಜಗ್ಗೇಶ್ ಕೂಡಾ ಶಾಂತಮ್ಮಜ್ಜಿಯನ್ನು ನೆನೆಸಿಕೊಂಡಿದ್ದು ‘ನನ್ನ ಅನೇಕ ಚಿತ್ರಗಳಲ್ಲಿ ನಟಿಸಿದ್ದರು. ಪಾರ್ವತಮ್ಮನವರ ಅನುಯಾಯಿ. ಯಾವಾಗಲೂ ಅವರ ಜತೆಯೇ ಇರುತ್ತಿದ್ದರು’ ಎಂದು ಕಂಬನಿ ಮಿಡಿದಿದ್ದಾರೆ.