200 ಸಿನಿಮಾಗಳ ಕತೆ ಕೇಳಿದ ಬಳಿಕ ಒಪ್ಪಿಕೊಂಡ ಮುರುಳಿ ಸಿನಿಮಾಗೆ ಮುಹೂರ್ತ ಫಿಕ್ಸ್‌

Sampriya
ಸೋಮವಾರ, 6 ಅಕ್ಟೋಬರ್ 2025 (18:37 IST)
Photo Credit X
ಜಯರಾಮ್ ದೇವಸಮುದ್ರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಪುನೀತ್ ರುದ್ರನಾಗ್ ನಿರ್ದೇಶನದಲ್ಲಿ ರೋರಿಂಗ್ ಸ್ಟಾರ್ ಶ್ರೀಮುರುಳಿ ಅವರು ಅಭಿನಯಿಸುತ್ತಿರುವ  `ಉಗ್ರಾಯುಧಮ್’ ಸಿನಿಮಾಗೆ ಮುಹೂರ್ತ ಇಂದು ನಡೆದಿದೆ. 

ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ಸಿನಿಮಾದ ಮುಹೂರ್ತ ನೆರವೇರಿತು. 

ಶ್ರೀಮುರಳಿ ಅವರ ತಂದೆ, ಹಿರಿಯ ನಿರ್ಮಾಪಕ ಎಸ್‌ಎ.ಚಿನ್ನೇಗೌಡ ಅವರು ಆರಂಭ ಫಲಕ ತೋರುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು. 

ಎಸ್‌ಎ.ಚಿನ್ನೇಗೌಡ ಹಾಗೂ ಪಿ.ಆರ್.ಓ ಸುಧೀಂದ್ರ ವೆಂಕಟೇಶ್ ಜೊತೆಗೂಡಿ ಶೀರ್ಷಿಕೆ ಅನಾವರಣ ಮಾಡಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ಈ ಸಿನಿಮಾದ700 ವರ್ಷಗಳ ಹಿಂದಿನ ಪಿರಿಯಾಡಿಕ್‌ ಡ್ರಾಮ ಕಥಾಹಂದರ ಹೊಂದಿರುವ ಸಿನಿಮಾ. 

ನವೆಂಬರ್‌ನಿಂದ ಚಿತ್ರೀಕರಣ ಆರಂಭವಾಗುತ್ತಿದೆ. ಸಕಲೇಶಪುರದ ಬಳಿ 135 ಎಕರೆ ವಿಸ್ತೀರ್ಣದ ಭೂಮಿಯಲ್ಲಿ ಅದ್ದೂರಿ ಸೆಟ್ ಹಾಕಲಾಗುತ್ತಿದ್ದು, ಅಲ್ಲೇ ಹೆಚ್ಚಿನ ಚಿತ್ರೀಕರಣ ನಡೆಯಲಿದೆ ಎಂದರು. 

ನಾನು ಡಾ.ರಾಜಕುಮಾರ್ ಅವರ ಅಪ್ಪಟ ಅಭಿಮಾನಿ. ಅವರ ಅಭಿನಯದ ಸಾಕಷ್ಟು ಐತಿಹಾಸಿಕ ಚಿತ್ರಗಳನ್ನು ನೋಡಿದ್ದೇನೆ. ಅದೇ ನನಗೆ ಈ ಚಿತ್ರ ನಿರ್ದೇಶನ ಮಾಡಲು ಸ್ಪೂರ್ತಿ ಎಂದರು. 

ಬಘೀರ ಸಿನಿಮಾ ಬಳಿಕ ಸುಮಾರು 200 ಕಥೆಗಳನ್ನು ಕೇಳಿದ್ದು ಅದರಲ್ಲಿ ಇಷ್ಟವಾದ ಕಥೆಯೆಂದರೆ ಅದು ಉಗ್ರಾಯುಧಮ್. ನಿರ್ದೇಶಕ ಪುನೀತ್ ರುದ್ರನಾಗ್ 700 ವರ್ಷಗಳ ಹಿಂದಿನ ಕಥೆಯನ್ನು ತೆರೆಯ ಮೇಲೆ ತರಲು ಮುಂದಾಗಿದ್ದಾರೆ. ನಿಜಕ್ಕೂ ಅವರು ಮಾಡಿಕೊಂಡಿರುವ ಕಥೆ ಬಹಳ ಚೆನ್ನಾಗಿದೆ. ಪಿರಿಯಾಡಿಕ್ ಡ್ರಾಮ ಕಥಾಹಂದರವನ್ನು “ಉಗ್ರಾಯುಧಮ್” ಚಿತ್ರ ಹೊಂದಿದೆ. <>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

200 ಸಿನಿಮಾಗಳ ಕತೆ ಕೇಳಿದ ಬಳಿಕ ಒಪ್ಪಿಕೊಂಡ ಮುರುಳಿ ಸಿನಿಮಾಗೆ ಮುಹೂರ್ತ ಫಿಕ್ಸ್‌

ಮರೆಯಾದ ರಾಕೇಶ್‌ ಪೂಜಾರಿಯನ್ನು ನೆನೆದುಕೊಂಡ ಕಾಂತಾರ ನಟ ಗುಲ್ಶನ್ ದೇವಯ್ಯ

ದರ್ಶನ್ ಗೆ ಜೈಲಿನಲ್ಲಿ ಬೇಕಾದ್ದು ಕೊಡ್ತಿಲ್ಲ ಎಂದು ಕೋರ್ಟ್ ಗೆ ಅರ್ಜಿ

ಯಾರೋ ಒಬ್ಬರಿಂದ ಇಂಡಸ್ಟ್ರಿ ನಡೀತಿಲ್ಲ: ದರ್ಶನ್ ಗೆ ಟಾಂಗ್ ಕೊಟ್ಟ ಉಮಾಪತಿ ಗೌಡ

ನಾನು ಕಂಡಿದ್ದು ಮ್ಯಾಜಿಕ್‌ಗಿಂತ ಕಡಿಮೆಯಿರಲಿಲ್ಲ: ರಿಷಭ್ ಶೆಟ್ಟಿ ಕೊಂಡಾಡಿದ ರಿತೇಶ್ ದೇಶ್‌ಮುಖ್

ಮುಂದಿನ ಸುದ್ದಿ
Show comments