ಮರೆಯಾದ ರಾಕೇಶ್‌ ಪೂಜಾರಿಯನ್ನು ನೆನೆದುಕೊಂಡ ಕಾಂತಾರ ನಟ ಗುಲ್ಶನ್ ದೇವಯ್ಯ

Sampriya
ಸೋಮವಾರ, 6 ಅಕ್ಟೋಬರ್ 2025 (18:21 IST)
Photo Credit X
ಮಂಗಳೂರು: ದೇಶವಿದೇಶದಲ್ಲೀ ಸದ್ದು ಮಾಡುತ್ತಿರುವ ಕಾಂತಾರ ಚಾಪ್ಟರ್ 1 ಸಿನಿಮಾಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.  ರಿಷಭ್ ಶೆಟ್ಟಿ, ನಿರ್ದೇಶನ ಹಾಗೂ ನಟನೆಗೆ ಸಿನಿಮಾ ರಂಗದ ಖ್ಯಾತ ನಟ, ನಟಿಯರು, ನಿರ್ದೇಶಕರು ಭಾರೀ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. 

ಚಿತ್ರ ನೋಡಿದವರು ರಿಷಬ್ ಶೆಟ್ಟಿಯ ಪ್ರತಿಭೆಯನ್ನು ಮೆಚ್ಚಿದ್ದಾರೆ. ಅವರನ್ನಷ್ಟೇ ಅಲ್ಲ,  ಚಿತ್ರದ ಎಲ್ಲಾ ಪಾತ್ರ, ಗ್ರಾಫಿಕ್ಸ್, ಸಂಗೀತ, ಸಾಹಿತ್ಯ ಎಲ್ಲವೂ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಇನ್ನೂ ವಿಶೇಷವಾಗಿ ಈಚೆಗೆ ಹೃದಯಾಘಾತದಿಂದ ಸಾವನ್ನಪ್ಪಿದ ರಾಕೇಶ್ ಪೂಜಾರಿ ಅವರನ್ನು ದೊಡ್ಡ ಪರದೆಯಲ್ಲಿ ಕಂಡು ಮೆಚ್ಚಿಕೊಂಡಿದ್ದಾರೆ. ಚಿತ್ರದಲ್ಲಿ ನವೀನ್ ಡಿ ಪಡೀಲ್ ಮಗನಾಗಿ ಅವರು ನಟಿಸಿದ್ದಾರೆ. ಕೇವಲ ನಟಿಸಿಲ್ಲ, ವೀಕ್ಷಕರನ್ನು ಹೊಣ್ಣೆ ಹುಣ್ಣಾಗುವಂತೆ ನಗಿಸಿದ್ದಾರೆ.  

ಕಾಂತಾರ ಸಿನಿಮಾದಲ್ಲಿ ಮಿಂಚಿರುವ ಬಾಲಿವುಡ್ ನಟ ಗುಲ್ಶನ್ ದೇವಯ್ಯ ರಾಕೇಶ್ ಬಗ್ಗೆ ಮೆಚ್ಚುಗೆಯನ್ನಾಡಿದ್ದಾರೆ.  ತಮ್ಮ ಸಾಮಾಜಿಕ ಜಾಲತಾಣ ಎಕ್ಸ್‌ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡ ಅವರು, ರಾಕೇಶ್‌ನನ್ನು ಹಾಡಿಹೊಗಳಿದ್ದಾರೆ. ನನಗೆ ರಾಕೇಶ್ ಪೂಜಾರಿಯ ಬಗ್ಗೆ ಹೆಚ್ಚೇನೂ ಗೊತ್ತಿಲ್ಲ. ಆದರೆ ಜನರು ಆತನ ಮೇಲಿಟ್ಟಿರುವ ಪ್ರೀತಿಯನ್ನು ಹಾಗೂ ಆತನನ್ನು ನೆನಪಿಸಿಕೊಳ್ಳುವ ಪರಿಯನ್ನು ನಾನು ಗಮನಿಸುತ್ತಿದ್ದು,  ಆತ ಎಂತಹ ಕಲಾವಿದ ಎಂಬುದರ ಅರಿವಾಗಿದೆ ಎಂಬರ್ಥದಲ್ಲಿ ಬರೆದುಕೊಂಡಿದ್ದಾರೆ.

ನಿಜವಾಗಿಯೂ ಅವರ ಬಗ್ಗೆ ತಿಳಿದಿರಲಿಲ್ಲ ಆದರೆ ಜನರು ಅವರನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತಾರೆಂದು ನನಗೆ ಅರ್ಥವಾಗುತ್ತಿದೆ ಎಂಬುದಾಗಿ ಪೋಸ್ಟ್‌ವೊಂದನ್ನು ರೀ ಪೋಸ್ಟ್ ಮಾಡಿ ಬರೆದುಕೊಂಡಿದ್ದಾರೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದರ್ಶನ್ ಡೆವಿಲ್ ಮೂವಿ ರಿಲೀಸ್: ಪತಿ ಮಾಡಬೇಕಾದ ಕೆಲಸವನ್ನು ಮಗನ ಜೊತೆ ಮಾಡಿದ ವಿಜಯಲಕ್ಷ್ಮಿ

ರೇಣುಕಾಸ್ವಾಮಿ ಸಮಾಧಿ ಧ್ವಂಸ, ಫೋಷಕರು ಏನ್ ಹೇಳ್ತಾರೆ ಗೊತ್ತಾ

ನಾಳೆ ಡೆವಿಲ್ ತೆರೆಗೆ, ಜೈಲಿನಲ್ಲಿದ್ರೂ ದರ್ಶನ್ ಕೈಬಿಡದ ಕನ್ನಡ ತಾರೆಯರು ಇವರೇ

IMDb 2025 ರ ಅತ್ಯಂತ ಜನಪ್ರಿಯ ಭಾರತೀಯ ಚಲನಚಿತ್ರಗಳು ಪ್ರಕಟ

ನಿನ್ನ ವ್ಯಕ್ತಿತ್ವಕ್ಕೆ ನಾನೇ ನಿನ್ನ ದೊಡ್ಡ ಚಿಯರ್‌ಲೀಡರ್‌: ರುಕ್ಮಿಣಿ ವಸಂತ್‌ಗೆ ಚೈತ್ರಾ ಪ್ರೀತಿಯ ವಿಶ್‌

ಮುಂದಿನ ಸುದ್ದಿ
Show comments