Select Your Language

Notifications

webdunia
webdunia
webdunia
webdunia

ಹೃದಯ ಶ್ರೀಮಂತನಿಗೆ ಹೃದಯಾಘಾತವೇ: ರಾಕೇಶ್‌ ಅಗಲಿಕೆಗೆ ಸ್ನೇಹಿತೆ ನಯನ ಕಂಬನಿ ನುಡಿಗಳು

Rakesh Poojary No More, Comedy Khiladigalu Nayana,  Kannadda Film Industry

Sampriya

ಬೆಂಗಳೂರು , ಸೋಮವಾರ, 12 ಮೇ 2025 (17:56 IST)
Photo Credit X
ಕಾಮಿಡಿ ಕಿಲಾಡಿಗಳು ಮೂಲಕ ಎಲ್ಲರ ಮನ ಗೆದ್ದು, ತನ್ನ ಮುಗ್ದತೆಯಿಂದ ಕನ್ನಡಿಗರನ್ನು ಮನಸ್ಸು ಗೆದ್ದು ಅಪಾರ ಅಭಿಮಾನಿಗಳನ್ನು ಗಳಿಸಿದ್ದ ನಟ ರಾಕೇಶ್ ಪೂಜಾರಿ ಹೃದಯಾಘಾತದಿಂದ ಸಾವನ್ನಪ್ಪಿರುವುದು ದೊಡ್ಡ ಆಘಾತ ತಂದಿದೆ.

ರಾಕೇಶ್ ಪೂಜಾರಿ ನಿಧನಕ್ಕೆ ಇಡೀ ಕನ್ನಡ ಚಿತ್ರರಂಗವೇ ಕಂಬನಿ ಮಿಡಿದಿದೆ. ರಾಕೇಶ್‌ ಪೂಜಾರಿ ಆಪ್ತ ಸ್ನೇಹಿತರು ಕಣ್ಣೀರ ವಿದಾಯ ಸಲ್ಲಿಸಿದ್ದಾರೆ. ರಾಕೇಶ್‌ಗೆ ನಟಿ ರಕ್ಷಿತಾ, ಅನುಶ್ರೀ, ನಯನಾ, ಸೂರಜ್‌, ಹಿತೇಶ್‌, ಅನೀಶ್‌, ಪ್ರವೀಣ್ ಜೈನ್‌ ಅಂತಿಮ ನಮನ ಸಲ್ಲಿಸಿದ್ದಾರೆ.  

ಸಾಮಾಜಿಕ ಜಾಲತಾಣದಲ್ಲಿ ನೆಚ್ಚಿನ ಸ್ನೇಹಿತನ ಅಕಲಿಕೆ ನೆನೆದು ಕಂಬನಿಯ ನುಡಿಗಳನ್ನು ನೀಡಿದ್ದಾರೆ. ನಟಿ ನಯನಾ ತನ್ನ ಆಪ್ತ ಸ್ನೇಹಿತನ ಅಕಲಿಗೆ ನೆನೆದು ಪೋಸ್ಟ್‌ ವೊಂದನ್ನು ಹಂಚಿಕೊಂಡಿದ್ದಾರೆ.

ನೀನು ನಮ್ಮೆಲ್ಲರ ನಗುವಲ್ಲಿ, ಮನಸಲ್ಲಿ ಇದ್ದೀಯ ಗೆಳೆಯ, ಆದರೆ ಇಷ್ಟು ಬೇಗನೆ  ವಿದಾಯ ಹೇಳುವ ಅವಸರವೇಕೆ, ಹೃದಯ ಶ್ರೀಮಂತನಿಗೆ ಹೃದಯಾಘಾತವೇ. ಅರಗಿಸಿಕೊಳ್ಳಲಾಗದ ಆಘಾತ, ಮಿಸ್‌ ಯೂ ಬ್ರೋ ಎಂದು ಬರೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Rakesh Poojary No More: ರಾಕೇಶ್‌ಗೆ ಅಂತಿಮ ನಮನ ಸಲ್ಲಿಸಿ, ಅಳುತ್ತಲೇ ಕೂತಾ ರಕ್ಷಿತಾ ಪ್ರೇಮ್‌, ಅನುಶ್ರೀ, ಕಿರುತೆರೆ ಕಲಾವಿದರು