Select Your Language

Notifications

webdunia
webdunia
webdunia
Wednesday, 2 April 2025
webdunia

ನಟಿ ವೇದಿಕಾಗೆ ಕೊರೊನಾ ಪಾಸಿಟಿವ್!

actress vedika corona positive ಕೊರೊನಾ ಪಾಸಿಟಿವ್‌ ವೇದಿಕಾ ಕನ್ನಡ ನಟಿ
bengaluru , ಬುಧವಾರ, 22 ಜೂನ್ 2022 (15:50 IST)
ಹ್ಯಾಟ್ರಿಕ್‌ ಹೀರೊ ಶಿವರಾಜ್ ಕುಮಾರ್ ಜೊತೆ ಶಿವಲಿಂಗ ಸೇರಿದಂತೆ ಕನ್ನಡದ ಹಲವು ಚಿತ್ರಗಳಲ್ಲಿ ನಟಿಸಿರುವ ನಟಿ ವೇದಿಕಾಗೆ ಕೊರೊನಾ ಪಾಸಿಟಿವ್‌ ದೃಢಪಟ್ಟಿದೆ.
ಸ್ವತಃ ವೇದಿಕಾ ಈ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ರೀತಿಯ ಜ್ವರದಿಂದ ಬಳಲುತ್ತಿರುವ ಅವರು, ಅಗತ್ಯ ಚಿಕಿತ್ಸೆಯನ್ನೂ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ.
ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಅಭಿಮಾನಿಗಳಿಗೆ ಕರೆ ನೀಡಿರುವ ಅವರು, ಇದೇ ಮೊದಲ ಬಾರಿಗೆ ನನಗೆ ಕೋವಿಡ್ ಪಾಸಿಟಿವ್ ಆಗಿದೆ. ನನ್ನ ದುರಾದೃಷ್ಟ ಎಂದು ನೋವು ಹಂಚಿಕೊಂಡಿದ್ದಾರೆ. 
ಮೊದ ಮೊದಲ ಜ್ವರದ ಲಕ್ಷಣಗಳಷ್ಟೇ ಕಾಣಿಸಿಕೊಂಡವು. ಆನಂತರ ತೀವ್ರ ಜ್ವರ ಶುರುವಾಯಿತು. ತಡಮಾಡದೇ ನಾನು ವೈದ್ಯರನ್ನು ಸಂಪರ್ಕ ಮಾಡಿದ್ದೇನೆ. ಯಾವುದೇ ಕಾರಣಕ್ಕೂ ಈ ವಿಷಯದಲ್ಲಿ ಯಾರೂ ನಿರ್ಲಕ್ಷ್ಯ ಮಾಡಬೇಡಿ. 103 ಡಿಗ್ರಿ ಜ್ವರ ಇದೆಯಂತೆ. ಮೈಕೈ ನೋವಿನಿಂದಲೂ ಅವರು ನರಳುತ್ತಿದ್ದೇನೆ ಎಂದು ಅವರು ಟ್ವೀಟರ್‌ ನಲ್ಲೂ ಹಂಚಿಕೊಂಡಿದ್ದಾರೆ.
ವೇದಿಕಾ ಶಿವಲಿಂಗ ಚಿತ್ರದಲ್ಲಿ ಶಿವಣ್ಣ ಜೋಡಿಯಾಗಿ ಕಾಣಿಸಿಕೊಂಡಿದ್ದು, ಕನ್ನಡ ಸಂಗಮ, ಹೋಮ್ ಮಿನಿಸ್ಟರ್, ಗೌಡರ ಹೋಟೆಲ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಜಯ್-ರಶ್ಮಿಕಾ ಮಂದಣ್ಣ ಸಿನಿಮಾಗೆ ಟೈಟಲ್ ಫಿಕ್ಸ್