Publish Date: Wed, 21 Oct 2020 (10:48 IST)
Updated Date: Wed, 21 Oct 2020 (10:50 IST)
ಚೆನ್ನೈ : ನಟಿ ವನಿತಾ ವಿಜಯ್ ಕುಮಾರ್ ಪ್ರಸಿದ್ಧ ನಟನ ಮಗಳೆಂಬ ಪರಿಚಯದೊಂದಿಗೆ ತಮಿಳು ಚಿತ್ರರಂಗಕ್ಕೆ ಪ್ರವೇಶಿಸಿದ್ದಾರೆ. ಆದರೆ ಇದೀಗ ಅವರ ವೈಯಕ್ತಕ ಜೀವನದ ಕುರಿತಾದ ಮಾಹಿತಿಯೊಂದು ಬಹಿರಂಗಗೊಂಡಿದೆ.
ನಟಿ ವನಿತಾ ಅವರು ತೀವ್ರ ವಿರೋಧದ ಮಧ್ಯೆ ಇತ್ತೀಚೆಗೆ ಪೀಟರ್ ಎಂಬುವವರನ್ನು ಪ್ರೀತಿಸಿ 3ನೇ ಮದುವೆಯಾದರು. ಅವರ ಮಕ್ಕಳು ಅವರ ಮದುವೆಗೆ ಸಮ್ಮತಿ ನೀಡಿದರು. ಆದರೆ ಇದೀಗ ಅವರು ತಮ್ಮ ಮೂರನೇ ಪತಿ ಪೀಟರ್ ಅವರನ್ನು ಮನೆಯಿಂದ ಹೊರಹಾಕಿದ್ದಾರೆ ಎನ್ನಲಾಗಿದೆ.
ಈ ವಿಚಾರವನ್ನು ನಿರ್ದೇಶಕ ರವೀಂದರ್ ಅವರು ಬಹಿರಂಗಪಡಿಸಿದ್ದಾರೆ. ಇತ್ತೀಚೆಗೆ ಗೋವಾಕ್ಕೆ ಹೋದಾಗ ಅಲ್ಲಿ ಪೀಟರ್ ಹೆಚ್ಚು ಕುಡಿಯುತ್ತಿದ್ದ ಕಾರಣ ಕೆಲವು ಸಮಸ್ಯೆಗಳು ಎದುರಾಗಿ ವನಿತಾ ಅವರನ್ನು ಮನೆಯಿಂದ ಹೊರಗೆ ಕಳುಹಿಸಿದ್ದಾರೆ ಎಂದು ಹೇಳಲಾಗಿದೆ.