Publish Date: Wed, 21 Oct 2020 (10:20 IST)
Updated Date: Wed, 21 Oct 2020 (10:24 IST)
ದುಬೈ: ಐಪಿಎಲ್ 13 ರಲ್ಲಿ 7 ಪಂದ್ಯ ಸೋತು ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಪ್ಲೇ ಆಫ್ ಹಂತಕ್ಕೇರಲು ಇನ್ನೊಂದು ಕಠಿಣ ಅವಕಾಶವಿದೆ.
ಚೆನ್ನೈ ಟೂರ್ನಿಯಲ್ಲಿ ಇನ್ನು ನಾಲ್ಕು ಲೀಗ್ ಪಂದ್ಯಗಳನ್ನಾಡಬೇಕಿದೆ. ಈ ನಾಲ್ಕೂ ಪಂದ್ಯಗಳನ್ನು ಗೆದ್ದರೆ ಚೆನ್ನೈಗೆ ಮುಂದಿನ ಹಂತಕ್ಕೆ ತೇರ್ಗಡೆಯಾಗಲು ಅವಕಾಶವಿದೆ. ಆದರೆ ಇದಕ್ಕೆ ಈಗಾಗಲೇ ಅಗ್ರ ಕ್ರಮಾಂಕದಲ್ಲಿರುವ ತಂಡಗಳ ಪೈಕಿ ಯಾವುದಾದರೂ ತಂಡ ಉಳಿದೆಲ್ಲಾ ಪಂದ್ಯಗಳನ್ನು ಸೋಲಬೇಕು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಅದು ಸುಲಭದ ಮಾತಲ್ಲ. ಹಾಗಿದ್ದರೂ ಕ್ರಿಕೆಟ್ ನಲ್ಲಿ ಯಾವುದೂ ಅಸಾಧ‍್ಯವೆನ್ನುವುದು ಇಲ್ಲ ಎಂಬುದನ್ನು ಮರೆಯಬಾರದು!