ಬೆಂಗಳೂರು: ವರನಟ ಡಾ ರಾಜ್ ಕುಮಾರ್ ಮತ್ತು ಸಾಹಸಸಿಂಹ ವಿಷ್ಣುವರ್ಧನ್ ಎಂಬ ಕನ್ನಡ ಚಿತ್ರರಂಗದ ದಿಗ್ಗಜ ನಟರು ಎಲ್ಲರೂ ಅಂದುಕೊಂಡಿದ್ದಿದ್ದೇ ಬೇರೆ, ಅವರು ಇದ್ದಿದ್ದೇ ಬೇರೆ. ಈ ಇಬ್ಬರು ದಿಗ್ಗಜ ನಟರ ಬಗ್ಗೆ ನಟಿ ತಾರಾ ಅನುರಾಧ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.
									
			
			 
 			
 
 			
					
			        							
								
																	ಹಿರಿಯ ಪತ್ರಕರ್ತ ಬಿ ಗಣಪತಿ ಅವರೊಂದಿಗಿನ ಯೂ ಟ್ಯೂಬ್ ಸಂದರ್ಶನದಲ್ಲಿ ನಟಿ ತಾರಾ ವಿಷ್ಣುವರ್ಧನ್ ಮತ್ತು ಅಣ್ಣಾವ್ರ ನಡುವೆ ಸಂಬಂಧ ಹೇಗಿತ್ತು ಎಂಬುದನ್ನು ಮನಬಿಚ್ಚಿ ಮಾತನಾಡಿದ್ದಾರೆ. ಇಬ್ಬರೂ ದಿಗ್ಗಜ ನಟರೊಂದಿಗೆ ಅಭಿನಯಿಸಿದ್ದ ಕಾರಣಕ್ಕೆ ತಾರಾ ಅವರಿಗೆ ಅವರಿಬ್ಬರ ಬಗ್ಗೆ ಚೆನ್ನಾಗಿಯೇ ಗೊತ್ತಿದೆ.
									
										
								
																	ಇದೇ ಮೊದಲ ಬಾರಿಗೆ ಯೂ ಟ್ಯೂಬ್ ಸಂದರ್ಶನವೊಂದರಲ್ಲಿ ತಮ್ಮ ಜೀವನಗಾಥೆ ಹಂಚಿಕೊಂಡಿರುವ ತಾರಾ ಅವರು ಅಣ್ಣಾವ್ರ ಬಗ್ಗೆ ವಿಷ್ಣುವರ್ಧನ್ ಗಿದ್ದ ಭಕ್ತಿ, ಪ್ರೀತಿ ಬಗ್ಗೆ ಮಾತನಾಡಿದ್ದಾರೆ. ಅಣ್ಣಾವ್ರು ಹೇಗೆ ಎಂದರೆ ಮಕ್ಕಳೊಂದಿಗೆ ಮಕ್ಕಳಾಗಿ, ದೊಡ್ಡವರೊಂದಿಗೆ ದೊಡ್ಡವರಂತೆ ಮಾತನಾಡ್ತಿದ್ದರು. ವಿಷ್ಣುವರ್ಧನ್ ಅವರು ಹಾಗಲ್ಲ. ಅವರು ಸ್ವಲ್ಪ ಗಂಭೀರವಾಗಿರುತ್ತಿದ್ದರು. ತುಂಬಾ ಓಪನ್ ಅಪ್ ಆಗುತ್ತಿರಲಿಲ್ಲ. ಸ್ವಲ್ಪ ರಿಸರ್ವ್ಡ್. ಆದರೆ ಒಮ್ಮೆ ಪರಿಚಯವಾದರೆ ಆತ್ಮೀಯವಾಗುತ್ತಿದ್ದರು.
									
											
							                     
							
							
			        							
								
																	ಹೊರಗಡೆ ಅಣ್ಣಾವ್ರು ಮತ್ತು ವಿಷ್ಣುವರ್ಧನ್ ಫ್ಯಾನ್ಸ್ ವಾರ್ ನಡೆಯುತ್ತಿತ್ತು. ಏನೋ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗಲ್ಲವೇನೋ ಎಂಬಂತೆ ಬಿಂಬಿಸಿದ್ದರು. ಆದರೆ ಅವರಿಬ್ಬರು ಹಾಗೆ ಇರಲೇ ಇಲ್ಲ. ಅಣ್ಣಾವ್ರನ್ನು ಕಂಡರೆ ವಿಷ್ಣುವರ್ಧನ್ ಅವರಿಗೆ ಎಂಥಾ ಭಕ್ತಿ, ಅಪಾರವಾದ ಪ್ರೀತಿ. ಅಣ್ಣಾವ್ರಿಗೂ ವಿಷ್ಣುವರ್ಧನ್ ಮೇಲೆ ಅಷ್ಟೇ ಗೌರವವಿತ್ತು. ಅದು ಯಾಕೆ ಇಬ್ಬರ ಬಗ್ಗೆ ಅಂತಹ ಸುದ್ದಿಗಳೆಲ್ಲಾ ಹಬ್ಬಿಸುತ್ತಿದ್ದರೋ ಗೊತ್ತಿಲ್ಲ ಎಂದಿದ್ದಾರೆ.