Select Your Language

Notifications

webdunia
webdunia
webdunia
webdunia

ನಟಿ ಸವಿ ಮಾದಪ್ಪ ಗೆಳೆಯನ ವಿಚಾರಣೆ ನಡೆಸಿದ ಪೊಲೀಸರು

ನಟಿ ಸವಿ ಮಾದಪ್ಪ ಗೆಳೆಯನ ವಿಚಾರಣೆ ನಡೆಸಿದ ಪೊಲೀಸರು
ಬೆಂಗಳೂರು , ಶನಿವಾರ, 2 ಅಕ್ಟೋಬರ್ 2021 (10:07 IST)
ಬೆಂಗಳೂರು: ಮೊನ್ನೆಯಷ್ಟೇ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆನ್ನಲಾದ ನಟಿ ಸವಿ ಮಾದಪ್ಪ ಅಲಿಯಾಸ್ ಸೌಜನ್ಯ ಸಾವಿನ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


ಸವಿ ಮಾದಪ್ಪ ಗೆಳೆಯ ವಿವೇಕ್ ಹಾಗೂ ಮೇಕಪ್ ಮ್ಯಾನ್ ನನ್ನು ಪೊಲೀಸರು ನಿನ್ನೆ ವಶಕ್ಕೆ ಪಡೆದಿದ್ದರು. ಬಳಿಕ ತಡರಾತ್ರಿವರೆಗೂ ವಿಚಾರಣೆ ನಡೆಸಿದ್ದಾರೆ. ಇಬ್ಬರ ನಡುವೆ ಮನಸ್ತಾಪವಿತ್ತೇ ಎಂಬಿತ್ಯಾದಿ ವಿಚಾರಗಳ ಬಗ್ಗೆ ತನಿಖೆ ನಡೆಸಿದ್ದಾರೆ.

ವಿವೇಕ್ ವಿರುದ್ಧ ಸವಿ ಮಾದಪ್ಪ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಮಗಳ ಬಳಿಯಿದ್ದ 6 ಲಕ್ಷ ರೂ. ಹಣ, ಚಿನ್ನಾಭರಣಗಳನ್ನು ವಿವೇಕ್ ತೆಗೆದುಕೊಂಡಿದ್ದಾನೆ. ಆತ ಮದುವೆಗಾಗಿ ಪೀಡಿಸುತ್ತಿದ್ದ ಎಂದು ದೂರಿನಲ್ಲಿ ಹೇಳಿದ್ದರು. ಈ ಆಯಾಮದಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಾ.ರಾಜ್ ಮೊಮ್ಮಗಳ ನಿನ್ನ ಸನಿಹಕೆ ವೀಕ್ಷಿಸಲಿರುವ ತಲೈವಾ ರಜನಿ!