Select Your Language

Notifications

webdunia
webdunia
webdunia
webdunia

ನಟಿ ಸೌಜನ್ಯ ಮೃತದೇಹ ಇಂದು ಕುಟುಂಬಸ್ಥರಿಗೆ ಹಸ್ತಾಂತರ

ನಟಿ ಸೌಜನ್ಯ ಮೃತದೇಹ ಇಂದು ಕುಟುಂಬಸ್ಥರಿಗೆ ಹಸ್ತಾಂತರ
ಬೆಂಗಳೂರು , ಶುಕ್ರವಾರ, 1 ಅಕ್ಟೋಬರ್ 2021 (09:26 IST)
ಬೆಂಗಳೂರು: ನಿನ್ನೆ ನೇಣಿಗೆ ಶರಣಾಗಿದ್ದ ಕಿರುತೆರೆ ನಟಿ ಸೌಜನ್ಯ ಮರಣೋತ್ತರ ಪರೀಕ್ಷೆ ಬಳಿಕ ಇಂದು ಪೊಲೀಸರು ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರಿಸಲಿದ್ದಾರೆ.


ಬೆಂಗಳೂರಿನ ತಮ್ಮ ಅಪಾರ್ಟ್ ಮೆಂಟ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸೌಜನ್ಯ ಮೃತದೇಹ ಪತ್ತೆಯಾಗಿತ್ತು. ಜೊತೆಗೆ ಡೆತ್ ನೋಟ್ ಕೂಡಾ ಸಿಕ್ಕಿತ್ತು. ಈ ಹಿನ್ನಲೆಯಲ್ಲಿ ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂಬ ನಿರ್ಣಯಕ್ಕೆ ಪೊಲೀಸರು ಬಂದಿದ್ದಾರೆ. ಹಾಗಿದ್ದರೂ ತನಿಖೆ ನಡೆಯುತ್ತಿದೆ.

ನಗರದ ಆರ್.ಆರ್ ನಗರ ಆಸ್ಪತ್ರೆಯಲ್ಲಿ ಸೌಜನ್ಯ ಮೃತದೇಹವಿರಿಸಲಾಗಿದ್ದು, ಇಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ. ಅದಾದ ಬಳಿಕ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಿಸಲಾಗುತ್ತದೆ. ಇಂದು ಸಂಜೆ ಕುಶಾಲನಗರದಲ್ಲಿ ಅವರ ಅಂತ್ಯಕ್ರಿಯೆ ನೆರವೇರಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಕಿಂಗ್ ಸ್ಟಾರ್ ಯಶ್ ಬರ್ತ್ ಡೇಗೆ 100 ದಿನ: ಟ್ವಿಟರ್ ನಲ್ಲಿ ಈಗಲೇ ಟ್ರೆಂಡ್ ಶುರು