ಬೆಂಗಳೂರು: "ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಅಂತ್ಯ" ಎಂದು ಸರಣಿ ಆತ್ಮಹತ್ಯೆಯ ಡೆತ್ ನೋಟ್ ನಲ್ಲಿ ಉಲ್ಲೇಖಿಸಲಾಗಿದೆ, ಇಂದು ನೆಡೆದ ಸ್ಪಾಟ್ ಮಹಜರ್ ಅಂತ್ಯವಾಗಿದೆ ನಾಳೆಗೆ ಕಂಪ್ಲೀಟ್ ಪೋಸ್ಟ್ ಮಾರ್ಟಮ್ ರಿಪೋರ್ಟ್ ಕೈಸೇರಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮೂರು ಡೆತ್ ನೋಟ್ ಗಳು ಪತ್ತೆ:
ಇಂದಿಂದ ಸ್ಪಾಟ್ ಮಹಜಾರ್ ಮನೆಯ ಯಜಮಾನ ಶಂಕರ್ ಸಮ್ಮುಖದಲ್ಲಿ ಪಶ್ಚಿಮ ವಿಭಾಗದ ಪೊಲೀಸರು ನೆಡೆಸಿದರು. ಈ ಸಂದರ್ಭದಲ್ಲಿ ಮಕ್ಕಳಾದ ಸಿಂಚನ, ಸಿಂಧುರಾಣಿ & ಮಧುಸಾಗರ್ ಬರೆದಿರುವ ಡೆತ್ ನೋಟ್ ಪತ್ತೆಯಾಗಿದೆ. ಸಿಂಚನ, ತನ್ನ ಪತಿ ಪ್ರವೀಣ್ ವಿರುದ್ಧ ಕಿರುಕುಳ ಆರೋಪಿಸಿ ಈ ಬಗ್ಗೆ ಡೆತ್ ನೋಟ್ ನಲ್ಲಿ ಕೂಡ ಉಲ್ಲೇಖಿಸಿದ್ದಾಳೆ. ಇತ್ತ ಸಿಂಧುರಾಣಿ ತನ್ನ ಪತಿ ಶ್ರೀಕಾಂತ್ ವಿರುದ್ಧ ಟಾರ್ಚರ್ ನೀಡಿರುವುದಾಗಿ ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದಾಳೆ. ಪತಿ ಶ್ರೀಕಾಂತ್ ಕಿರುಕುಳದ ಬಗ್ಗೆ ಪೂರ್ತಿಯಾಗಿ ಬರೆದಿಟ್ಟಿದ್ದಾಳೆ. ಇಬ್ಬರು ಹೆಣ್ಮಕ್ಕಳ ಡೆತ್ ನೋಟ್ ನಲ್ಲಿ ಹಲವು ಅಂಶ ಉಲ್ಲೇ ಖಿಸಲಾಗಿದೆ ಎನ್ನಲಾಗುತ್ತಿದೆ.
ನಮಗೆ ತಂದೆ ಮನೆಯಲ್ಲಿ ನೋಡಿಕೊಳ್ಳಲಿಲ್ಲ, ಗಂಡನ ಮನೆಯಲ್ಲೂ ಸರಿಯಾಗಿ ನೆಮ್ಮದಿ ಇರಲಿಲ್ಲ. ಹೀಗಾಗಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೇರೆಯಲಾಗಿದೆ. ಎಲ್ಲವೂ 3-4 ಪುಟಗಳ ಸುಧೀರ್ಘ ಡೆತ್ ನೋಟ್ ನಲ್ಲಿ ಸುದೀರ್ಘವಾಗಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
10 -12 ಲಕ್ಷ ನಗದು ಪತ್ತೆಯಾಗಿದೆ:
ಪೊಲೀಸ್ ಮೂಲಗಳ ಹೇಳಿಕೆಯಂತೆ ನಾಲ್ಕು ಫೋನ್, ಮೂರು ಲ್ಯಾಪ್ ಟಾಪ್ ಮತ್ತು ಕೆಲವು ದಾಖಲೆಗಳನ್ನು ಸೀಜ್ ಮಾಡಲಾಗಿದೆ. ಅಂದಾಜು 1 ಕೆಜಿಜಿ ಚಿನ್ನಾಭರಣ 10-12 ಲಕ್ಷ ನಗದು ಪತ್ತೆಯಾಗಿದೆ.ಮಡಚಿದ ರೀತಿಯಲ್ಲಿ ಮನೆಯಲ್ಲಿ ನೋಟುಗಳು ಬಿದ್ದಿವೆ ಎಂದು ತಿಳಿದುಬಂದಿದೆ.