Select Your Language

Notifications

webdunia
webdunia
webdunia
webdunia

ಕತೆಗಾತಿಯಾದ ನಟಿ ರಂಜಿನಿ ರಾಘವನ್ ಪುಸ್ತಕ ಬಿಡುಗಡೆ

ಕತೆಗಾತಿಯಾದ ನಟಿ ರಂಜಿನಿ ರಾಘವನ್ ಪುಸ್ತಕ ಬಿಡುಗಡೆ
ಬೆಂಗಳೂರು , ಗುರುವಾರ, 30 ಸೆಪ್ಟಂಬರ್ 2021 (10:06 IST)
ಬೆಂಗಳೂರು: ‘ಕನ್ನಡತಿ’ ಧಾರವಾಹಿ ಖ್ಯಾತಿಯ ನಟಿ ರಂಜಿನಿ ರಾಘವನ್ ಕಥಾ ಸರಣಿ ಆನ್ ಲೈನ್ ಮುಖಾಂತರ ಕೆಲವು ದಿನಗಳಿಂದ ಪ್ರಕಟವಾಗುತ್ತಿತ್ತು. ಇದೀಗ ಅದೆಲ್ಲಾ ಒಟ್ಟು ಸೇರಿಸಿ ರಂಜಿನಿ ಪುಸ್ತಕವೊಂದನ್ನು ಹೊರತಂದಿದ್ದಾರೆ.


ಕತೆಡಬ್ಬಿ ಎಂಬ ಶೀರ್ಷಿಕೆಯ ಪುಸ್ತಕ ಬಿಡುಗಡೆಯಾಗಿದ್ದು, ಇದರಲ್ಲಿ ರಂಜಿನಿ ಬರೆದ ಕತೆಗಳ ಗುಚ್ಛವಿದೆ. ನಿನ್ನೆ ಈ ಪುಸ್ತಕವನ್ನು ನಟ ರಿಷಿ, ಸಾಹಿತಿ ಜೋಗಿ ಸರಳ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ನಟ ರಿಷಿ ಕಲಾವಿದರು ಕತೆಗಾರರಾಗುವುದು ಉತ್ತಮ ಬೆಳವಣಿಗೆ ಎಂದು ಕೊಂಡಾಡಿದ್ದಾರೆ.

ಇನ್ನು, ರಂಜಿನಿ ಪುಸ್ತಕಕ್ಕೆ ಭಾರೀ ಬೇಡಿಕೆ ಬಂದಿದ್ದು, ಬಿಡುಗಡೆಗೂ ಮೊದಲೇ ಬುಕಿಂಗ್ ಆಗಿದೆಯಂತೆ. ಹೀಗಾಗಿ ತಮ್ಮ ಹೊಸ ಪ್ರಯತ್ನದ ಬಗ್ಗೆ ರಂಜಿನಿ ಖುಷಿಯಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದಸರಾಗೆ ರಾಕಿಂಗ್ ಸ್ಟಾರ್ ಯಶ್ ಗುಡ್ ನ್ಯೂಸ್