ಬೆಂಗಳೂರು: ಕಿರುತೆರೆಯಿಂದ ಹಿರಿತೆರೆಗೆ ಬಂದು ಮಿಂಚಿದ ನಟರಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಕೂಡಾ ಒಬ್ಬರು. ಈಗ ಅವರು ಮತ್ತೆ ಕಿರುತೆರೆಗೆ ಮರಳುತ್ತಿದ್ದಾರೆ.
									
										
								
																	
ಆಂಕರ್ ಆಗಿ ಕಿರುತೆರೆಗೆ ಬಂದಿದ್ದ ಗಣೇಶ್ ಬಳಿಕ ಸಿನಿಮಾ ಲೋಕಕ್ಕೆ ಎಂಟ್ರಿ ಪಡೆದರು. ಅದಾದ ಬಳಿಕ ಮತ್ತೆ ಕಲರ್ಸ್ ಕನ್ನಡ ವಾಹಿನಿಯ ಸೂಪರ್ ಮಿನಿಟ್ಸ್ ಕಾರ್ಯಕ್ರಮ ನಡೆಸಿಕೊಟ್ಟರು. ಇದಾದ ಬಳಿಕ ಅವರು ಕೆಲವು ವರ್ಷಗಳಿಂದ ಕಿರುತೆರೆಯಿಂದ ದೂರವೇ ಇದ್ದರು.
									
			
			 
 			
 
 			
			                     
							
							
			        							
								
																	ಈಗ ಮತ್ತೆ ಕಿರುತೆರೆಯ ರಿಯಾಲಿಟಿ ಶೋ ಒಂದನ್ನು ನಡೆಸಿಕೊಡಲು ಬರುತ್ತಿದ್ದಾರೆ. ಈ ಬಾರಿ ಜೀ ಕನ್ನಡ ವಾಹಿನಿಯ ರಿಯಾಲಿಟಿ ಶೋನಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಆದರೆ ಆ ಶೋ ಏನು, ಗಣೇಶ್ ಏನು ಮಾಡಲಿದ್ದಾರೆ ಎನ್ನುವುದು ಸದ್ಯದಲ್ಲೇ ಗೊತ್ತಾಗಲಿದೆ.