Publish Date: Fri, 10 Sep 2021 (09:31 IST)
Updated Date: Fri, 10 Sep 2021 (09:38 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾದ 55 ನೇ ಸಿನಿಮಾದ ಟೈಟಲ್ ಇಂದು ಗಣೇಶ ಹಬ್ಬದಂದು ಘೋಷಣೆಯಾಗಿದೆ.
ಡಿ ಬಾಸ್ ಹೊಸ ಸಿನಿಮಾಗೆ ಕ್ರಾಂತಿ ಎಂದು ಹೆಸರಿಡಲಾಗಿದೆ. ಹೆಸರಿನಲ್ಲೇ ಒಂದು ಅಗ್ರೆಷನ್ ಇದೆ. ಜೊತೆಗೆ ಫಸ್ಟ್ ಲುಕ್ ನಲ್ಲಿ ದರ್ಶನ್ ಲುಕ್ ಕೂಡಾ ರಗಡ್ ಆಗಿದೆ.
ಇದು ಕನ್ನಡ ಮಾತ್ರವಲ್ಲದೆ, ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಪ್ಯಾನ್ ಇಂಡಿಯಾ ಸಿನಿಮಾವಾಗಲಿದೆ. ವಿ. ಹರಿಕೃಷ್ಣ ನಿರ್ದೇಶನದಲ್ಲಿ ಈ ಸಿನಿಮಾ ಅದ್ಧೂರಿಯಾಗಿ ಮೂಡಿಬರಲಿದೆ.