Publish Date: Fri, 01 Oct 2021 (10:24 IST)
Updated Date: Fri, 01 Oct 2021 (10:25 IST)
ಬೆಂಗಳೂರು: ಆತ್ಮಹತ್ಯೆ ಮಾಡಿಕೊಂಡಿರುವ ಕನ್ನಡ ಕಿರುತೆರೆ ನಟಿ ಸೌಜನ್ಯ ಅಲಿಯಾಸ್ ಸವಿ ಮಾದಪ್ಪ ಬಾಯ್ ಫ್ರೆಂಡ್, ಮ್ಯಾಕಪ್ ಮ್ಯಾನ್ ನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಅಪಾರ್ಟ್ ಮೆಂಟ್ ನಲ್ಲಿ ಸವಿ ಮಾದಪ್ಪ ಜೊತೆಗೆ ಬಾಯ್ ಫ್ರೆಂಡ್ ವಿವೇಕ್ ಕೂಡಾ ವಾಸವಾಗಿದ್ದ ಎಂಬ ಸುದ್ದಿಯಿತ್ತು. ಈ ಹಿನ್ನಲೆಯಲ್ಲಿ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸಿದ್ದರು.
ಇದೀಗ ವಿವೇಕ್ ನನ್ನು ಪತ್ತೆ ಮಾಡಿರುವ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆತನ ಜೊತೆಗೆ ಮ್ಯಾಕಪ್ ಮ್ಯಾನ್ ಮಹೇಶ್ ನನ್ನೂ ಬಂಧಿಸಲಾಗಿದೆ. ಇಬ್ಬರ ವಿರುದ್ಧ ಕುಂಬಳಗೋಡು ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿತ್ತು. ಮಗಳ ಸಾವಿನ ಬಗ್ಗೆ ಸವಿ ಮಾದಪ್ಪ ತಂದೆ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದರು. ಹೀಗಾಗಿ ಇಬ್ಬರನ್ನೂ ತನಿಖೆಗೊಳಪಡಿಸಲಾಗುತ್ತಿದೆ.