Select Your Language

Notifications

webdunia
webdunia
webdunia
webdunia

ನಟಿ ನಯನತಾರಾ ಮದುವೆ: ವರ ಯಾರು ಗೊತ್ತೇ?

ನಟಿ ನಯನತಾರಾ ಮದುವೆ: ವರ ಯಾರು ಗೊತ್ತೇ?
ಹೈದರಾಬಾದ್ , ಭಾನುವಾರ, 5 ಮೇ 2019 (07:49 IST)
ಹೈದರಾಬಾದ್: ಖ್ಯಾತ  ನಟಿ ನಯನತಾರಾ ಕೊನೆಗೂ ಮದುವೆಯಾಗುವ ಮನಸ್ಸು ಮಾಡಿದ್ದಾರೆ. ಈ ವರ್ಷವೇ ನಯನತಾರಾ ಮದುವೆಯಾಗಲು ನಿರ್ಧರಿಸಿದ್ದಾರೆ. ಅಂದ ಹಾಗೆ ಅವರು ಮದುವೆಯಾಗುತ್ತಿರುವುದು ಯಾರನ್ನು ಗೊತ್ತಾ?


ಬಹುಕಾಲದ ಗೆಳೆಯ ವಿಘ್ನೇಶ್ ಶಿವನ್ ಅವರನ್ನು ನಯನತಾರಾ ಮದುವೆಯಾಗಲಿದ್ದಾರೆ. 2015 ರಲ್ಲಿ ಈ ಜೋಡಿ ‘ನಾನು ರೌಡಿದಾನ್’ ಸಿನಿಮಾ ಸೆಟ್ ನಲ್ಲಿ ಭೇಟಿಯಾಗಿದ್ದರು. ಅಲ್ಲಿಂದ ಪ್ರಾರಂಭವಾದ ಸ್ನೇಹ ಇಲ್ಲಿಯವರೆಗೆ ಮುಂದುವರಿದಿದೆ.

ಕಳೆದ ವರ್ಷವೇ ಇವರಿಬ್ಬರೂ ತಮ್ಮ ಪ್ರೀತಿ ವಿಚಾರವನ್ನು ಬಹಿರಂಗಪಡಿಸಿದ್ದರು. ಇದೀಗ ಎರಡೂ ಕುಟುಂಬಗಳೂ ಬೇಗನೇ ಮದುವೆಗೆ ಒತ್ತಾಯಿಸುತ್ತಿದೆ ಎನ್ನಲಾಗಿದೆ. ಆದರೆ ಇನ್ನೂ ಈ ಬಗ್ಗೆ ಇಬ್ಬರೂ ಏನೂ ಬಹಿರಂಗ ಪ್ರತಿಕ್ರಿಯೆ ನೀಡಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ರಿಷಬ್ ಶೆಟ್ಟಿ ಹೊಸ ಸಿನಿಮಾದ ವಿಚಿತ್ರ ಹೆಸರು ನೋಡಿ ಜನ ಏನಂತಿದ್ದಾರೆ ಗೊತ್ತಾ?