Publish Date: Wed, 01 May 2019 (08:01 IST)
Updated Date: Wed, 01 May 2019 (08:04 IST)
ಚೆನ್ನೈ: ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿ ಅದೆಷ್ಟೋ ಹುಡುಗರ ಹೃದಯಕ್ಕೆ ಲಗ್ಗೆಯಿಟ್ಟಿರುವ ನಟಿ ಕಾಜಲ್ ಅಗರ್ವಾಲ್ ನಿಜ ಜೀವನದಲ್ಲಿ ಯಾರನ್ನೂ ಲವ್ ಮಾಡುತ್ತಿಲ್ವಾ?
ಲವ್ ಲೈಫ್ ಬಗ್ಗೆ ಅಂತೂ ಅವರು ಏನೂ ಹೇಳಿಲ್ಲ. ಆದರೆ ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ತಮಗೆ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ರೋಹಿತ್ ಶರ್ಮಾ ಮೇಲೆ ಕ್ರಶ್ ಇದೆ ಎಂದು ಒಪ್ಪಿಕೊಂಡಿದ್ದಾರೆ.
ಕಾಜಲ್ ರೋಹಿತ್ ಶರ್ಮಾರ ದೊಡ್ಡ ಫ್ಯಾನ್ ಎಂದು ಎಲ್ಲರಿಗೂ ಗೊತ್ತು. ಫ್ಯಾನ್ ಮಾತ್ರವಲ್ಲ, ನನಗೆ ರೋಹಿತ್ ಅಂದರೆ ಇಷ್ಟ ಎಂದಿದ್ದಾರೆ. ಆದರೆ ಇವರ ಬಗ್ಗೆ ಗಾಸಿಪ್ ಏನೂ ಏಳುವಂತಿಲ್ಲ. ಯಾಕೆಂದರೆ ರೋಹಿತ್ ಈಗಾಗಲೇ ಮದುವೆಯಾಗಿ ಒಂದು ಮುದ್ದು ಮಗುವಿಗೆ ತಂದೆಯಾಗಿ ಸುಖೀ ದಾಂಪತ್ಯ ನಡೆಸುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ